ಸ್ಮಾರ್ಟ್ ಫೋನ್ ಗೆಳತಿ!

ಇವಳೊಂತರ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್, ಪರಿಚಯ ಆದದ್ದು ಆನ್ ಲೈನ್ ನಲ್ಲೇ. ಇಂಥಹ  ನೈಜ್ಯ ಭಾಂಧವ್ಯ ಇಂಟರ್ನೆಟ್ ಅಲ್ಲಿ ಸಿಗೋದು  ಈಗಿನ ಕಾಲಕ್ಕೆ ಸ್ವಲ್ಪ ಅತಿಶಯೋಕ್ತಿ ಅನ್ನಿಸಿದ್ರು ಕೂಡ ಲಕ್ಷ್ಮಿ ನಂಗೆ ಪರಿಚಯ ಅದದ್ದೂ ಆನ್ ಲೈನ್ ನಲ್ಲೇ. 
ಕೋವಿಡ್ ಸಮಯದಲ್ಲಿ ಕ್ಲಬ್ ಹೌಸ್ ಬಾರಿ ಚಾಲ್ತಿಯಲ್ಲಿತ್ತು. ನಾನು ಆಗ ಕ್ಲಬ್ ಹೌಸಿಗೆ ಮೊದಲ ಬೆಂಚಿನ ವಿದ್ಯಾರ್ಥ. ಆದರೆ ಲಕ್ಷ್ಮಿ ಸಿಕ್ಕಿದ್ದು ಕ್ಲಬ್ ಹೌಸ್ನಲ್ಲಿ ಅಲ್ಲ.. ಕ್ಲಬ್ ಹೌಸ್ ನಲ್ಲಿ ನಂಗೆ ಸಾಕಷ್ಟು ಸ್ನೇಹಿತ ಬಳಗ ಪರಿಚಯವಾಗಿ ಹೀಗಲೂ ಅವರೊಟ್ಟಿಗೆ ಮಾತು ಕಥೆ-ಹಾಡು ಹರಟೆ ಭೇಟಿಯಾಗುವದು ಈಗಲೂ ನೆಡೆಯುತ್ತಿರುತ್ತದೆ. ಆ ಸಮಯದಲ್ಲಿ ಕ್ಲಬ್ ಹೌಸಿನಿಂದ ಇಷ್ಟಾಗ್ರಾಮ್ ವರೆಗೂ ಸಾಕಷ್ಟು ಜನರ ಪರಿಚಯವಾಯಿತು. ಆಗ ಕಂಟೆಂಟ್ಗಳನ್ನು ಸಾಕಷ್ಟು ಮಾಡುತ್ತಿದ್ದೆ.. ಸಾಮಾನ್ಯವಗಿ ನಾನು ವಾಯ್ಸ್ ಓವರ್ ಮಾಡೋದು ನನ್ನ ಹವ್ಯಾಸ ನನ್ನದೇ ಭಾವನೆಗಳನ್ನ ಧ್ವನಿ ಮುದ್ರಿಸಿ ಪೋಸ್ಟ್ ಮಾಡಿತ್ತಿದ್ದೆ. ಹೀಗೆ ಒಂದು ಪೋಸ್ಟ್ ತಕ್ಕಮಟ್ಟಿಗೆ ವೈರಲ್ ಆಗುತ್ತಿತ್ತು, ಆಗ ಆ ಪೋಸ್ಟನ್ನು ನನಗೆ ಇನ್ಸ್ಟಾಗ್ರಾಮ್ ನಲ್ಲಿ ರೀ ಪೋಸ್ಟ್ ಮಾಡಿ ನಿಮ್ಮ ವಾಯ್ಸ್ ಚನ್ನಾಗಿದೆ ಎಂದವಳು ಲಕ್ಷ್ಮಿ. ಎಷ್ಟೋ ಸಾರಿ ಈ ರೀತಿ ಮೆಚ್ಚುಗೆಯ ಮಾತುಗಳು ಅಪರಿಚತರಿಂದ ಕೇಳಿದ್ದಿತ್ತು ಆದರೆ ಲಕ್ಷ್ಮಿ ಆ ಸಣ್ಣ ಬಿಂಕ ಬಿಗುಮಾನದಿಂದ ಮಾಡಿದ ಮೆಸೇಜ್ ಒಂಥರ ಮಜಾ ಕೊಟ್ಟಿತ್ತು. ನಾನು ಕೂಡ ಸ್ವಲ್ಪ ಗಮನಾರ್ಹ ಬಿಂಕ ತೋರುತ್ತಾ ಥ್ಯಾಂಕ್ ಯು ಕೀಪ್ ಸಪೋರ್ಟಿನ್ಗ್ ಅಂತೇಳಿ ಅವತ್ತಿನ ಕಾಸ್ ಬಾತ್ ಮುಗಿಸಿದ್ದೆ... ಇಬ್ಬರು ಪರಸ್ಪರ ಅನುಯಾಯಿಗಳಾದ್ವಿ.. ಇನ್ಸ್ಟಾಗ್ರಾಮ್ ನಲ್ಲಿ ನಾ ಹಾಕುತ್ತಿದ್ದ ಸ್ಟೋರಿಗಳನ್ನ ಓದುತ್ತಿದ್ದಳು ಲಕ್ಷ್ಮಿ. ಎಷ್ಟೋ ಸಾರಿ ಪ್ರತಿಕ್ರಿಯೆಯನ್ನ ಎಮೋಜಿಗಳ ಮೂಲಕ ವ್ಯಕ್ತಪಡಿಸುತ್ತಿದ್ದಳು. ಅಂತಹ ಹೃದಯ ಕಲುಕವ ಭಾವನೆಗಳೇನು ಆಕೆಯ ಮೇಲೆ ಇರಲಿಲ್ಲ ಮತ್ತು ಆಸಕ್ತಿಯೂ ಇರಲಿಲ್ಲ ಆದರೆ ಹೊಸ ವ್ಯಕ್ತಿ ವ್ಯಕ್ತಿತ್ವ ಪರಿಚಯ ಆಗೋದ್ರಲ್ಲಿ ತಪ್ಪೇನಿದೆ ಅಂತ ಒಂದೊಮ್ಮೆ ನಾನೇ ಮೆಸೇಜ್ ಮಾಡಿದ್ದೆ. ನಂಬರ್ ರವಾನೆ ಕೂಡ ಆಯಿತು. 
ವಾಟ್ಸಾಪನಲ್ಲಿ ಅಗೊಂದು ಈಗೊಂದು ಮೆಸೇಜ್ ಮಾಡುತ್ತಿದ್ವಿ. ನಂಗೆ ಅವಳನ್ನ ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಗಮನಿಸಿದಾಗ ವಿ ಆರ್ ಲೈಕ್ ಮೈಂಡೆಂಡ್ ಅನ್ನಿಸುತ್ತಿತ್ತು. ಅವಳೊಟ್ಟಿಗೆ ಒಮ್ಮೆಯಾದರೂ ಮಾತಾಡಬೇಕು ಅನ್ನಿಸುತ್ತಿತ್ತು ಆದರೆ ನಾನಾಗಿ ನಾನು ಕಾಲ್ ಮಾಡೋದು ಸರಿ ಅಲ್ಲ ಅನ್ನಿಸುತ್ತಿತ್ತು. ಅವಳಿಗೆ ನನ್ನ ಗೋಜು ಅರ್ಥ ಆಯಿತು ಅಂತ ಕಣತ್ತೆ ಅವಳೇ ಒಂದು ದಿನ ಕಾಲ್ ಕೂಡ ಮಾಡಿದ್ಲು. ಲಕ್ಷ್ಮಿ ಮೂಲತಃ ಧಾರವಾಡದ ಹುಡುಗಿ ಚೂರು ಘಾಟಿ ಅಷ್ಟೇ ವಿನಯವಂತೆ, ಬೇಸಿಕಲಿ ಇಂಟ್ರೊವರ್ಟ್ ರೀತಿ ಕಂಡಳು, ಅವಳು ಹೆಚ್ಚು ಅಭಿವ್ಯಕ್ತವಾಗುವವಳಲ್ಲ. ನನಗೆ ಅನುಭವ ಆದಂತೆ ಯಾರೇ ಪರಿಚಯ ಆದ್ರೂ ಕೂಡ ಅವರ ಪೂರ್ವಾನುಭವಗನ್ನ ಮತ್ತು ಸ್ವವಿವರಗಳನ್ನ ಹೇಳಿಕೊಳ್ಳುವುದು ಸಾಮಾನ್ಯ, ಆದರೆ ಲಕ್ಸ್ಮಿ ವಿಶೇಷ ಅನ್ನಿಸಿದ್ದು ಇಲ್ಲೇ ನೋಡಿ. ಇಲ್ಲಿಯ ತನಕ ನಾವಿಬ್ಬರೂ ನಮ್ಮ ಪೂರ್ವನುಭವಗಳನ್ನಾಗಲಿ ಅಥವ ನಮ್ಮ ಬಗ್ಗೆ ನಾವೇ ಹೇಳಿಕೊಳ್ಳುವುದಾಗಲಿ ಮಾಡಿಲ್ಲ. ಹೆಚ್ಚು ಕಡಿಮೆ ನಾನು ಹುಡುಕುತ್ತಿದ್ದ ಸ್ನೇಹಿತರು ಕೂಡ ಇಂಥವರೆ. ಗಂಟೆಗಟ್ಟಲೆ ಮಾತಾಡುತ್ತಿದ್ದೇವಾದರೂ ಹೆಚ್ಹೇಂದರೆ ಒಬ್ಬರನೊಬ್ಬರು ಕಾಲೆಳೆದುಕೊಂಡು, ಹಾಡುಗಳನ್ನ ಹಾಡುತ್ತಿದ್ದೆವು ಅಷ್ಟೆ. ದಿನ ನಂಗೆ ಲಕ್ಷ್ಮಿ ಹೊಸ ತೆರನಾದ ಹಾಡುಗಳನ್ನ ಕಳಿಸುತ್ತಿದ್ದಳು. ಮನದ ಮೂಲೆಯಲ್ಲಿ ಅಡಗಿದ್ದ ಸಾಕಷ್ಟು ಭಾವಗಳನ್ನ ಬಡಿದೇಳುವಂತೆ ಮಾಡುತ್ತಿದ್ದವು ಅವಳ ಹಾಡುಗಳು. ಈಗಲೂ ಹಾಡುಗಳನ್ನ ಕಳಿಸುತ್ತಾಳೆ ಲಕ್ಷ್ಮಿ. ಯಾವತ್ತಿಗೂ ಕಳಿಸುತ್ತಿರಲಿ ಎಂಬ ಭಯಕೆ

-ಅವಿಜ್ಞಾನಿ

Comments

Popular Posts