ತಾಂತ್ರಿಕತೆಯ ಭೂತ




     


ಜಗವ ತೊರೆದು ದೂರ ಸರಿದವು 

ಬುಗುರಿ ಚಿನ್ನಿದಂಡು ಪಗಡೆಯಾಟ.      
ತಾಂತ್ರಿಕತೆಯ ಸೊಬಗಿನಲಿ 
ಜನರ ಹುಚ್ಚೆಬ್ಬಿಸಿತು ಸಿನಿಮಾ ಪಾಠ..

ಪಾರಿವಾಳದ ಜೊತೆ ಹಾರಿಹೋದವು 
ತೇಲಿಗ್ರಾಮ್ ಟೆಲಿಫೋನ್ ಪತ್ರ
ಮೊಬೈಲ್ ಎಂಬ ನಶೆ ದರೆಗಿಳಿದು
ಈಗ ಮುಖ ಪುಟ ವಾಟ್ಸಪ್ ಮಾತ್ರ

ಎನ್ನುವ ನನ್ನ ಚುಟುಕು ಈಗಿನ ಪೀಳಿಗೆಗೆ ಅಕ್ಷರಶ:ಸೂಕ್ತವಾಗಿ ಸರಿಹೊಂದುವುದು.ತಾಂತ್ರಿಕಥೆಯೇ ಇಲ್ಲದೆ ಬದುಕಿ ಬಾಳಿದವರ ಮುಂದೆ ನಗೆಪಾಠಲಾಗಿ ತಲೆಬಾಗಬೇಕಾದ ಪರಿಸ್ಥಿತಿ,ಈ ತಾಂತ್ರಿಕಜಗತ್ತು ಕೆಲವೊಮ್ಮೆ ಕರಳವಾಗಿ ಕಂಡು ಮುಂದಿನ ದಿನಗಳ ದುಃಸ್ಥಿತಿಯನ್ನ ವಿವರಿಸಿದಾಗ ಎಲ್ಲೋ ಮನದಲ್ಲಿ ಮರುಕವುಂಟಾಗುತ್ತದೆ.ಎಷ್ಟೋ ಓದುಗರ ಎಷ್ಟೋ ಯುವ ಕವಿಗಳ ಹೃದಯಾಂತರಾಳ ಹೊಕ್ಕು ತಲೆಯಕೆಡಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.ಎಷ್ಟೋ ಮನೆಗಳು ಕಾತುರದಿಂದ ಮಾಸ ಪತ್ರಿಕೆಗಳಿಗಾಗಿ ವಾರಕ್ಕೊಮ್ಮೆ ಬರುತ್ತಿದ್ದ ಮ್ಯಾಗಝಿನ್ಗಳಿಗಾಗಿ,ಬರುಬರುತ್ತಾ ದಿನಪತ್ರಿಕೆಗಳಿಗಾಗಿ ಹಂಬಲಿಸುವ ಮನಗಳ ಸಂಖ್ಯೆಯು ಕ್ಷೀಣಿಸುತ್ತಿದೆ ಕ,ಮೊಬೈಲ್ನ ಕೈವಶ ಮಾಡಿಕೊಂಡು ಅದರ ದಾಸರಾಗುತ್ತಿದ್ದೇವೆ.ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ತನ್ನ ತವರಿನಿಂದೋ ಅಥವ ಆತ್ಮೀಯರಿಂದ ಬರುವ ಟೆಲಿಫೋನ್ ಕರೆಗಾಗಿ ನೀರೀಕ್ಷಿಸುತ್ತಿದದ್ದು,ಪ್ರತಿ ನಿಮಿಷಕ್ಕೂ ಲೆಕ್ಕ ಹಾಕಿ ಹಾಡುತ್ತಿದ್ದ ಚವಕಾಸಿಯ ಮಾತುಗಳು ನೀಡುತ್ತಿದ್ದ ಸಂತಸ ಇವತ್ತು ಹೆಚ್ಚಿನ ಪಟ್ಟು ನೀಡಿದರು ಅದರಿಂದ ಉಪಯೋಗಕ್ಕಿಂತ,ಪಿಡುಗುಗಳೇ ಜಾಸ್ತಿ.ಸಾಲದು ಎಂಬಂತೆ ಮುಖಪುಸ್ತಕ,ವಾಟ್ಸಾಪ್ ಇತರೆ ಸಾಮಾಜಿಕ ಜಾಲತಾಣಗಳೇ ಬಂದು ಬಳಗವೆಲ್ಲವೆಂಬಂತೆ ನೈತಿಕತೆಯಿಂದ ದೂರ ಸರಿಯುತ್ತಿದ್ದಾರೆ,ಕ್ರಮೇಣ ಜನ ದೂರಸರಿದರು ಪರ್ಯಾಯವನ್ನ ತಾಂತ್ರಿಕತೆಯಿಂದ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ.

ಭಾವನೆಗಳು ಬದಲು
ಇವೆಲ್ಲವೂ ಒಂದೆಡೆ ಆದರೆ ಇನ್ನೂ ಒನ್ಲೈನ್ ಚ್ಯಾಟ್ಗಳಬಗ್ಗೆ ಹೇಳುವುದಾದರೆ,ಮನಸ್ಸು ದೇಹಗಳ ನಡುವೆ ಆಟವಾಡುತ್ತಿರುವ ಸಾಧನವೆಂದರೆ ತಪ್ಪಾಗದು
ದೇಹ ಸರಿ ಇದ್ದು ಮನಸ್ಸು ಕೆಟ್ಟಾಗ ಆಡುವ ಮಾತಿಗೂ ಮನಸ್ಸು ಸರಿ ಇದ್ದು ದೇಹ ಸುಸ್ತಾದಾಗ ಆಡುವ ಮಾತಿಗೂ ಬಿನ್ನವೇ ಇರದ ಹಾಗೆ ಎಷ್ಟೋ ಸಂಬಂಧಗಳು ಆಳಗಿರುವ ಉದಾಹರಣೆಗಳುಂಟು
ಇನ್ನು ಅಪರಿಚಿತ ವ್ಯಕ್ತಿಗಳನ್ನ ಗೆಳೆಯರನ್ನಾಗಿ ಮಾಡಿಕೊಳ್ಳುವ ವ್ಯವಸ್ಥೆ ನಮ್ಮ ಸಂಸ್ಕೃತಿ ಅಷ್ಟೇನು ಒಪ್ಪುವುದಿಲ್ಲ.ಸಂಸ್ಕೃತಿಯ ವಿಚಾರಕ್ಕಿಂತ ಇಲ್ಲಿ ಅಪಾಯಗಳೇ ಹೆಚ್ಚು ಎಂದು ನನ್ನ ಭಾವನೆ.ಮೊದಲು ಸ್ನೇಹ,ಸ್ನೇಹದಿಂದ ಒಡನಾಟ, ಒಡನಾಟದಿಂದ ತುಡಿತಗಳು ಕಡೆಗೆ ಕಾಮಕ್ಕೆ ತುತ್ತಾಗುವ ಸಾಧ್ಯತೆಗಳುಂಟು ಹಾಗೆ ನಿದರ್ಶನಗಳು ಇವೆ.ಸ್ನೇಹ ಭಾವ ಗಟ್ಟಿಯಾಗಲು ಮಾದ್ಯಮಗಳನ್ನ ಜೀವನದಲ್ಲಿ ತಂದುಕೊಳ್ಳಬೇಕೆ ಹೊರತು ಅವುಗಳಿಗೆ ದಾಸರಾಗುವುದು ಅಷ್ಟೇನು ಒಳಿತಲ್ಲ.ತೀವ್ರವಾಗಿ ಕಾಡುತ್ತಿರುವ ಸಮಸ್ಯೆಯಾಗಿರುವ ಮಾದಕ ವ್ಯಾಸನದ ಸರದಿಗೆ ತಾಂತ್ರಿಕತೆಯೂ ಸೇರುವ ಎಲ್ಲ ಅರ್ಹತೆಗಳು ತಾಂತ್ರಿಕತೆಗಿದೆ ಎಂದರೆ ಬಹುಶ: ತಪ್ಪಲ್ಲ.

ರಕ್ಷಿತ್ ಆಚಾರ್ಯ(ಶಿರ)
ಯುವ ಕವಿ, ರಂಗಕರ್ಮಿ

Comments

Popular Posts