ನಾವು ನಿಮಗಿಂತ ಮೊದಲು ಬಂದವರು ಬುಸ್ಸ್ ಬುಸ್ಸ್!!


 ಬುಸ್ಸ್ ಬುಸ್ಸ್ ಎಂದು ದ್ವನಿ ಗುಟ್ಟುತ್ತ,ಎಡೆ ಎತ್ತಿ ನಿಂತ ಅಂದ್ರೆ ಆ ದೋಂಬರಾಟವನ್ನ ನೋಡುವ ಶಕ್ತಿ ಯಾರಿಗೆ ತಾನೇ ಇದೆ ಹೇಳಿ? ಹಾವಿನ ದ್ವೇಶ ಹನ್ನೆರಡು ವರ್ಷ ಅನ್ನುವುದು ಕೇಳಿರುತ್ತೀರಿ ಆದರೆ ಇವೆಲ್ಲವೂ ಮಾನವ ನಿರ್ಮಿತ ಸುಳ್ಳುನಂಬಿಕೆಗಳು ಎಂದರ ಅತಿಶಯೋಕ್ತಿಯಲ್ಲ.

Image result for snakes imagesಹಾವುಗಳ ಪಳೆಯುಳಿಕೆಗಳು ದೊರೆಯುವುದು ಅಪರೂಪ.ದೊರೆತ ಪಳೆಯುಳಿಕೆಗಳಲ್ಲಿ ಅತ್ಯಂತ 9ಹಳೆಯದು ಎಂದರೆ ಸುಮಾರು ೧೧೨ ರಿಂದ ೯೪ ಮಿಲಿಯ ವರ್ಷಗಳಷ್ಟು ಪ್ರಾಚೀನವಾದುದು. ಶರೀರಶಾಸ್ತ್ರದ ಅಧ್ಯಯನದಿಂದ ಹಾವುಗಳು ಹಲ್ಲಿಗಳ ಜಾತಿಯಿಂದ ಉಗಮವಾಗಿರುತ್ತವೆ. ಸುಮಾರು ೧೫ ಕುಟುಂಬಕ್ಕೆ ಸೇರಿದ ೨೯೦೦ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ.ಅಂಟಾರ್ಟಿಕವನ್ನು ಹೊರತುಪಡಿಸಿ ಉಳಿದ ಎಲ್ಲಾ ಖಂಡಗಳಲ್ಲಿಯೂ,ಸಮುದ್ರ ಹಾಗೂ ಸುಮಾರು ೧೬೦೦೦ ಅಡಿ ಎತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಕೂಡಾ ಹಾವುಗಳು ಕಾಣಸಿಗುತ್ತವೆ. ಸುಮಾರು ೧೫ ಕುಟುಂಬಕ್ಕೆ ಸೇರಿದ ೨೯೦೦ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ.ಅಂಟಾರ್ಟಿಕವನ್ನು ಹೊರತುಪಡಿಸಿ ಉಳಿದ ಎಲ್ಲಾ ಖಂಡಗಳಲ್ಲಿಯೂ,ಸಮುದ್ರ ಹಾಗೂ ಸುಮಾರು ೧೬೦೦೦ ಅಡಿ ಎತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಕೂಡಾ ಹಾವುಗಳು ಕಾಣಸಿಗುತ್ತವೆ



ನಿಮಗಿಂತ ಮೊದಲು ಈ ಭೂಮಿಯ ವಾರಸುದಾರು 

ನಾವು ಹೌದು ಈ ಹಾವುಗಳು ನಮಗಿಂತ ಮುಂಚೆ ಈ ಜೀವ ಜಗತ್ತಿನಲ್ಲಿ ಹುಟ್ಟಿ ಬೆಳೆಯುತ್ತ ಬಂದಿವೆ.
ಹಾವು ಒಂದು ಉರಗ. ಸರೀಸೃಪ ಜಾತಿಗೆ ಸೇರಿದ ಪ್ರಾಣಿ. ಕಶೇರುಖ (ಬೆನ್ನು ಉರಿ ಮೂಳೆ) ಗುಂಪಿನ ಈ ಪ್ರಾಣಿಗೆ ಕಾಲುಗಳಿಲ್ಲ, (ಆದರೆ ಬೇರೆ ಜಾತಿಯ ಸರೀಸೃಪಗಳಿಗೆ ಇರುತ್ತವೆ.)ತೆವಳುತ್ತಾ ನಡೆಯುವ ಈ ಪ್ರಾಣಿಗಳು ಮಾಂಸಾಹಾರಿಗಳು.
ಅರ್ಥ : ಹಾವು -ಸರ್ಪ, ಸರೀಸೃಪ, ಉರಗಹಲ್ಲುಕಳೆದ ಹಾವು, ಹೆರೆಕಳಚಿದ ಹಾವು.
ನಮ್ಮ‌ ಸುತ್ತಲಿನ ಪ್ರಮುಖ ನಾಲ್ಕು ವಿಷಕಾರಿ ಹಾವುಗಳು



ವಿಶ್ವ ಉರಗ ದಿನ
ವಿಶ್ವ ಉರಗ ದಿನ ಈ ದಿನವನ್ನು ಪ್ರತಿ ವರ್ಷ ಜುಲೈ 16 ರಂದು ಆಚರಿಸಲಾಗುತ್ತದೆ ಇದರ ಉದ್ದೇಶವೇ ಹಾವುಗಳ ಬಗ್ಗೆ ಅರಿತು ಕೊಳ್ಳುವುದು ಹಾಗು ಹಾವಿನ ಮೇಲೆ ನಮಗಿರುವ ಭಯ ಮತ್ತು ಭ್ರಮೇಗಳನ್ನು ಹೋಗಲಾಡಿಸುವುದು ಮತ್ತೇಕೆ ತಡ ಬನ್ನಿ ಅರಿತು ಕೊಳ್ಳೋಣ.
Image result for world snake dayನಮಗಿಂತ ಮೊದಲೆ ಈ ಭೂಮಿಯ ವಾರಸುದಾರರಾಗಿದ್ದ ಇವುಗಳು 240 ಮಿಲಿಯನ್ನು ವರ್ಷಗಳ ಹಿಂದೆಯೇ ಇವುಗಳು ಉಗಮ ಗೊಂಡಿವೆ. ಇವು ಸಮಶಿತೋಷ್ಣ ಪ್ರದೇಶ ಮತ್ತು ಉಷ್ಣ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ ಅತ್ಯಂತ ಶೀತ ಪ್ರದೇಶಗಳಾದ ಆರ್ಕಾಟಿಕ್, ನ್ಯೂಜಿಲ್ಯಾಂಡ್,ಐರ್‍ಲ್ಯಾಂಡ್ ಮತ್ತು ಹಿಮಾಲಯದಲ್ಲಿ ಇವುಗಳು ಜೀವಿಸುವುದಿಲ್ಲ ಪ್ರಪಂಚದಾಧ್ಯಂತ 2600 ಪ್ರಭೇದದ ಹಾವುಗಳಿವೆ ಇವುಗಳಲ್ಲಿ ಶೇಖಡ 80 ರಷ್ಟು ವಿಷ ರಹಿತವಾಗಿವೆ, ಭಾರತದಲ್ಲಿ 15 ಸೆಂಟಿಮೀಟರ್‍ನ ಕುರುಡು ಹಾವಿನಿಂದ 9 ಮೀಟರ್ ಉದ್ದದ ಹೆಬ್ಬಾವಿನವರೆಗೆ 294 ಪ್ರಭೇಧದ ಹಾವುಗಳಿವೆ ಅವುಗಳಲ್ಲಿ 52 ಪ್ರಭೇಧದ ಹಾವುಗಳು ಮಾತ್ರ ವಿಷಕಾರಿಯಾಗಿವೆ ನಮ್ಮ ಕರ್ನಾಟಕದಲ್ಲಿ ಕೇವಲ 10 ಪ್ರಭೇಧದ ಹಾವುಗಳು ಮಾತ್ರ ವಿಷಕಾರಿಯಾಗಿವೆ ಅವೇಂದರೆ ನಾಗರಹಾವು, ಕಟ್ಟಾವು, ಕೊಳಕು ಮಂಡಲ, ರಕ್ತಮಂಡಲ ಈ ನಾಲ್ಕು ನಮ್ಮ ವಾಸಸ್ಥಳದ ಸುತ್ತಮುತ್ತ ಕಂಡುಬಂದರೆ ಕಾಳಿಂಗ ಸರ್ಪ, ಹವಳದಹಾವು, ಮಲಬಾರ್ ಗುಳಿ ಮಂಡಲ, ಗೂನು ಮೂಗಿನ ಗುಳಿ ಮಂಡಲ,ಬಿದಿರು ಗುಳಿ ಮಂಡಲ ಅರಣ್ಯ ಪ್ರದೇಶ ಹಾಗೂ ಅದರ ತಪ್ಪಲಿನಲ್ಲಿ ಕಂಡುಬರುತ್ತದೆ ಸಮುದ್ರದ ಕಟ್ಟವುಗಳು ಸಮುದ್ರ ತೀರದಲ್ಲಿ ಕಂಡು ಬರುತ್ತವೆ .
ಹಾವುಗಳೆಂದರೆ ಮನುಷ್ಯನಿಗೆ ಭಯ,ಭಕ್ತಿ,ಆತಂಕ,ಆಕರ್ಷಣೆ,ಕುತುಹಲಗಳು ಮೂಡುತ್ತದೆ. ಹಾವುಗಳು ಭಿನ್ನ ಭಿನ್ನ ವಿನ್ಯಾಸ, ಬಣ್ಣ, ವಿಭಿನ್ನ ನಡವಳಿಕೆಗಳನ್ನು ಹೊಂದಿರುತ್ತವೆ. ಹಾರುವ, ವಿಷ ಉಗಿಯುವ, ಮೊಟ್ಟೆಇಡುವ, ಮರಿಹಾಕುವ, ಸರಾಗವಾಗಿ ಈಜ ಬಲ್ಲ ಅಷ್ಟೇ ಸರಾಗವಾಗಿ ಮರ ಏರಬಲ್ಲ ವೈವಿದ್ಯ ವಿಸ್ಮಯಗಳು ಹಾವುಗಳಲ್ಲಿ ಕಂಡುಬರುತ್ತವೆ.

Image result for world snake day  ಹಾವುಗಳಲಿನ ವೈವಿದ್ಯ ವಿಸ್ಮಯಗಳು

* ಕೊಳಕು ಮಂಡಲ, ರಕ್ತಮಂಡಲ, ಮರಳು ಹಾವು, ಹಸಿರುಹಾವು ಮರಿಗಳನ್ನಿಟ್ಟರೆ ನಾಗರಹಾವು, ಕಟ್ಟಾವು, ಕೇರೆಹಾವು ಹೆಬ್ಬಾವು ಕಾಳಿಂಗ ಸರ್ಪ, ನೀರಾವು ಮುಂತಾದವು ಮೊಟ್ಟೆಗಳನಿಡುತ್ತವೆ.
* ಕುರುಡು ಹಾವುಗಳಲ್ಲಿ ಗಂಡು ಹಾವುಗಳಿಲ್ಲ ಹೆಣ್ಣೆಸ್ವಫಲಿಕೃತಗೊಂಡು ಮೊಟ್ಟೆಯನ್ನು ಇಡುತ್ತವೆ.
* ಹೆಬ್ಬಾವು ಒಂದನ್ನು ಹೊರತು ಪಡಿಸಿ ಉಳಿದ ಯಾವ ಹಾವು ಮೊಟ್ಟೆಗೆ ಕಾವು ನೀಡುವುದಿಲ್ಲ, ಹೆಬ್ಬವು ಮಾತ್ರ ಮಟ್ಟೆಯನ್ನು ಸುತ್ತಿಕುಳಿತು ಮರಿ ಆಗುವ ವರೆಗೂ ಕಾವು ನೀಡುತ್ತದೆ.
* ಎಲ್ಲ ಹಾವುಗಳು ಪೊರೆ ಕಳಚುತ್ತವೆ ವರ್ಷಕ್ಕೆ 4 ರಿಂದ 6 ಬಾರಿ ಈ ಪ್ರಕ್ರಿಯೇ ನಡೆಯುತ್ತದೆ.
* ಪುಟ್ಟ ಕುರುಡು ಹಾವಿನಿಂದ ದೈತ್ಯಗಾತ್ರದ ಹೆಬ್ಬಾವಿನವರೆಗೆ ಎಲ್ಲಾ ಹಾವುಗಳು ಮಾಂಸಹಾರಿಗಳು ಯಾವ ಹಾವು ಹಾಲು ಕುಡುಯುವುದಿಲ್ಲ ಇವುಗಳ ಮುಖ್ಯ ಆಹಾರ ಸರೀಸೃಪಗಳು,ಪಕ್ಷಿಗಳು,ಸಸ್ತನಿಗಳು ಮತ್ತು ಉಭಯವಾಸಿಗಳು.
* ಹಾವುಗಳು ತಮ್ಮ ಆಹಾರವನ್ನು ಅಗಿದು ತಿನ್ನುವುದಿಲ್ಲ ತನ್ನ ಭೇಟೆಯ ಸಂಪೂರ್ಣ ದೇಹವನ್ನೆ ನುಂಗತ್ತವೆ ಮೂಳೆಯ ಸಹಿತ ಇಡಿ ದೇಹವನ್ನೆ ಜೀರ್ಣಿಸಿಕೊಳ್ಳುತ್ತದೆ.
* ಪಪಂಚದಲ್ಲೆ ಅತ್ಯಂತ ದೊಡ್ಡದಾದ ವಿಷಕಾರಿ ಹಾವೆಂದರೆ ಕಾಳಿಂಗ ಸರ್ಪ ಇದು 5 ಮೀಟರ್ ವರೆಗೂ ಬೆಳೆಯ ಬಲ್ಲವು
* ಪ್ರಪಂಚದ ಅತ್ಯಂತ ವೇಗವಾದ ಅತಿ ಅಪಾಯಕಾರಿಯಾದ ವಿಷದ ಹಾವೆಂದರೆ ಬ್ಲಾಕ್ ಮಾಂಬ ಇದು ಗಂಟೆಗೆ 12.5 ಕಿಮಿ ವೇಗದಲ್ಲಿ ಚಲಿಸುತ್ತದೆ (ಇದು ಆಫ್ರಿ ದೇಶದಲ್ಲಿ ಕಂಡುಬರುತ್ತದೆ).
* ಹಾರುವ ಹಾವು (ಫ್ಲಯಿಂಗ್ ಸ್ನೇಕ್) ಈ ಹಾವು ಬಣ್ಣ ಬಣ್ಣಗಳ ವರ್ಣರಂಜಿತವಾದ ಸುಂದರ ದೇಹವನ್ನು ಹೊಂದಿರುವ ಇವು ತಮ್ಮ ಪಕ್ಕೆಲುಗಳನ್ನು ಅಗಲಿಸಿಕೊಂಡು ಪ್ಯಾರಚೂಟ್ ನಂತೆ ಮರದಿಂದ ಮತ್ತೊಂದು ಮರಕ್ಕೆ ಹಾರುತ್ತವೆ.
* ಬಹುತೇಕ ಎಲ್ಲಾ ಪ್ರಭೇದದ ಗಂಡು ಹಾವುಗಳು (combet) ಮಿಲನ ಪೂರ್ವ ಹೋರಾಟ ಮಾಡುತ್ತವೆ ಗೆದ್ದ ಹಾವುಗಳು ಹೆಣ್ಣಾವುಗಳನ್ನು ಸೇರುತ್ತವೆ.
* ಕುರುಡು ಹಾವು ಬಿಟ್ಟು ಉಳಿದ ಎಲ್ಲಾ ಪ್ರಭೇದದ ಹಾವುಗಳಲ್ಲು ಗಂಡು ಮತ್ತು ಹೆಣ್ಣು ಇವೆ ಜನ
ಸಾಮಾನ್ಯವಾಗಿ ಜನ ನಾಗರ ಹಾವು ಗಂಡು ಕೇರೆಹಾವು ಹೆಣ್ಣು ಇವೆರಡೂ ಸರಸ ವಾಡುತ್ತವೆ ಎನ್ನುತಾರೆ ಅದು ಸುಳ್ಳು.
* ಹಾವಿನ ವಿಷಕ್ಕೆ ಔಷಧಿಯನ್ನು ತಯಾರಿಸುವುದೆ ಹಾವಿನ ವಿಷದಿಂದ ಹಾವಿನ ವಿಷವನ್ನು ಕುದುರೆಗೆ ನೀಡುತ್ತಾರೆ ಕುದುರೆಯ ರಕ್ತದಲ್ಲಿ ವಿಷ ನಿರೋಧಕ (Anti snake venom) ಉತ್ಪತ್ತಿಯಾಗುತ್ತದೆ ಇದನ್ನೆ ಹಾವಿನ ಕಡಿತಕ್ಕೊಳಗಾದ ವ್ಯಕಿಗಳಿಗೆ ನೀಡುತ್ತಾರೆ.
* ಹಾವುಗಳಿಗೆ ಕಿವಿಗಳಿಲ್ಲ ಯಾವ ಹಾವು ಪುಂಗಿ ಶಬ್ಧಕ್ಕೆ ಬರುವುದಿಲ್ಲ.
* ಹಾವುಗಳಿಗೆ ನಾಲಿಗೆಯೊಂದು ಉತ್ತಮ ಗ್ರಂಥಿ ಇದು ರುಚಿ ತಿಳಿಸುವುದಿಲ್ಲ ಬದಲಾಗಿ ತನ್ನ ಸಮೀಪ ಇರುವ
ಪ್ರಾಣಿ ಪಕ್ಷಿ ಯಾವುದು ಎಂದು ಗುರುತಿಸಿತ್ತದೆ ಇದರ ನಾಲಿಗೆ ರೇಡಿಯೋ ಆಂಟೇನ ರೀತಿ ಕಾರ್ಯ
ನಿರ್ವಹಿಸುತ್ತದೆ.
* ಹೆಬ್ಬಾವು, ಬಿದಿರು ಗುಳಿ ಮಂಡಲ, ಮಲಬಾರ್ ಗುಳಿ ಮಂಡಲ, ಗೂನು ಮೂಗಿನ ಗುಳಿ ಮಂಡಲ ದಂತ ಕೆಲವು ಹಾವುಗಳಲ್ಲಿ ಉಷ್ಣವನ್ನು ಗುರುತಿಸುವ ಒಂದು ಜೊತೆ ಗುಳಿಗಳನ್ನು ಹೊಂದಿದ್ದು ಉಷ್ಣರಕ್ತದ

ಪ್ರಾಣಿಗಳನ್ನು ಗುರುತಿಸಲು ಭೇಟೆ ಆಡಲು ಇದು ಸಹಾಯವಾಗಿದೆ ಇದು 0.0003 c ರಷ್ಟು ಕಡಿಮೆ

 ಉಷ್ಣಾಂಶವನ್ನು ಗುರುತಿಸುತ್ತವೆ

* ವಿಷದ ಹಾವುಗಳಿಗೆ ಮೇಲ್ದವಡೆಯ ಮುಂಭಾಗದಲ್ಲಿ ಒಂದು ಜೊತೆಯ ವಿಷದ ದಂತಗಳು ಇರುತ್ತವೆ ಇವು “ಸಿರಿಂಜ್”ನ್ನು ಹೋಲುತ್ತವೆ ಕಟ್ಟಾವು,ಕಾಳಿಂಗ, ನಾಗರ ಹಾವುಗಳು ಸ್ಥಿರವಾದ 1 ಸೆಂ.ಮೀ ಉದ್ದ
ವಿಷದ ದಂತ ಹೊಂದಿರುತ್ತವೆ, ಕೊಳಕು ಮಂಡಲದ ವಿಷದಂತ 1 ಇಂಚಿಗಿಂತಲು ಉದ್ದವಿದು ಚಲಿಸುವ ತಿರುತಣೆ (HINGE) ಸ್ಥಿತಿಯನ್ನು ಹೊಂದಿದು ಕ್ಯಾನ್‍ವಾಸ್ ಶೂಗಳ ಮೇಲಿಂದೆ ಕಡಿಯುವಷ್ಟು
ದೊಡ್ಡದಾಗಿರುತ್ತವೆ.
* ಹಾವುಗಳ ವಿಷಗಳಲ್ಲಿ ಎರೆಡು ವಿಧ ನಾಗರ ಹಾವು,ಕಟ್ಟಾವು,ಕಾಳಿಂಗ ಗಳದ್ದು ನರಮಂಡಲದ ಮೇಲೆ ಪ್ರಭಾವ ಬೀರುವಂತಹ  NEUROTIC, ಕೊಳಕು ಮಂಡಲ,ರಕ್ತ ಮಂಡಲದ ವಿಷ ರಕ್ತ ಹಾಗೂ ಮಾಂಸಖಂಡಗಳ ಮೇಲೆ ಪ್ರಭಾವ ಬೀರುವ HAEMOTOXIC.

ವಿಷದ ಹಾವಿನ ಕಡಿತದ ಲಕ್ಷಣಗಳು
Image result for snake poisonವಿಷದ ಹಾವು ಕಡಿದರೆ ಕೆಲವೇ ನಿಮಿಷಗಳಲ್ಲಿ ಕಡಿತವಾದ ಶರೀರ ಭಾಗದಲ್ಲಿ ಬೆಂಕಿಯಲ್ಲಿ ಸುಟ್ಟಂತೆ ಉರಿ, ನೋವು, ಸೆಳೆತ ಮತ್ತು ಕಡಿದ ಜಾಗ ಸ್ವಲ್ಪ ಸಮಯಕ್ಕೆ ಕೆಂಪು ಬಣ್ಣಕ್ಕೆ ತಿರುಗುತ್ತದೆ, ನಾಲಿಗೆಯು ದಪ್ಪವಾದಂತೆ ಭಾಸವಾಗುತ್ತದೆ,  ಕೆಲವರಿಗೆ ವಾಕರಿಕೆಯ ಲಕ್ಷಣಗಳು ಕಂಡುಬರುತ್ತವೆ, ಕೈ ಕಾಲುಗಳು ಸ್ವಾಧೀನ ಕಳೆದುಕೊಳ್ಳುತ್ತದೆ ಕಣ್ಣು ಮಂಜಾಗಿ ಕಣ್ಣಿನ ರೆಪ್ಪೆ ತೆರೆಯಲು ಕಷ್ಟವಾಗುತ್ತದೆ,ಉಸಿರುಗಟ್ಟಿದಂತಾಗಿ ಹೃದಯಕ್ರಿಕೆ ಸ್ತಬ್ಧವಾಗುತ್ತದೆ.ಹಾವಿ ಕಡಿತಕ್ಕೊಳಗಾದ ವ್ಯಕ್ತಿಗೆ                                                                                                                                                       ಏನುಮಾಡ ಬೇಕು?ಕಡಿತಕ್ಕೆ ಒಳಗಾದ ವ್ಯಕ್ತಿಗೆ ಮೊದಲಿಗೆ ದೈರ್ಯ ತುಂಬ ಬೇಕು ಹಾವು ಕಚ್ಚಿದ 2-3 ನಿಮಿಷದೊಳಗೆ 1ರಿಂದ2 ಇಂಚು ಅಂತರದಲ್ಲಿ ಒಂದು ಪೆನ್ ತೂರುವಷ್ಟು ಲಘುವಾಗಿ ಮತ್ತೊಂದು ಕಟ್ಟನು 1 ಅಡಿ ಅಂತರದಲ್ಲಿ ಕಟ್ಟಬೇಕು ಅತಿ ಬಿಗಿತದ ಕಟ್ಟುನ್ನು ಹಾಕಬಾರದು.

ಕಡಿತಕ್ಕೆ ಒಳಗಾದ ವ್ಯಕಿ ಓಡ ಬಾರದು, ಸೈಕಲ್ ತುಳಿಯ ಬಾರದು ಕಡಿತವಾದ ಭಾಗಕ್ಕೆ ಹೆಚ್ಚು ಚಲನೆ ನೀಡ ಬಾರದು.ಶುದ್ಧವಾದ ನೀರಿ ನಿಂದ ಕಚ್ಚಿದ ಜಾಗವನ್ನು ಹಿಂಡಿ ಹಿಂಡಿ ತೊಳೆಯ ಬೇಕು ಯಾವುದೆ ಕಾರಣಕ್ಕೂ ಕಡಿತದ ಜಾಗವನ್ನು ಚಾಕು, ಬ್ಲೇಡ್ ನಿಂದ ಕತ್ತರಿಸ ಬಾರದು ರಾತ್ರಿ ವೇಳೆ ಯಾವುದೇ ಹಾವು ಕಚ್ಚಿದರು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೋಯ್ಯ ಬೇಕು.ಸಮಯ ವ್ಯರ್ಥಮಾಡದೆ ತಕ್ಷಣ ಕಡಿತಕೊಳಗಾದ ವ್ಯಕ್ತಿಯನ್ನು ಹಾವಿನ ಕಡಿತಕ್ಕೆ ಚಿಕಿತ್ಸೆ ಕೊಡುವ ಹತ್ತಿರದ ಆಸ್ಪತ್ರೆಗೆ ಶಿಘ್ರವಾಗಿ ಸೇರಿಸ ಬೇಕು.ಹಾವುಗಳಿಂದ ಅಂತರ ಕಾಯ್ದುಕೊಳ್ಳುವುದ ಹೇಗೆ?ಮುಖ್ಯವಾಗಿ ಮನೆಯ ಸುತ್ತ ಮುತ್ತ ಬೆಳೆಯುವ ಗಿಡಗಂಟಿ ಪೊದೆಗಳನ್ನು ಆಗಾಗ ತೆರವುಗೊಳಿಸುವುದು, ಮನೆ ಆಸು ಪಾಸಿನಲ್ಲಿರು ಇಲಿ ಹೆಗ್ಗಣದ ಬಿಲಗಳನ್ನು ಆಗಾಗ ಮುಚ್ಚುತ್ತಿರ ಬೇಕು, ಮನೆಯ ಮೇಲೆ ಬಳ್ಳಿಗಳನ್ನು ಹಬ್ಬಿಸುವುದು ಮರದ ರೆಂಬೆ ಕೊಂಬೆಗಳನ್ನು ಮನೆಯ ಮಾಡಿನ ಮೇಲೆ ಬೆಳೆಯಲು ಬಿಡಬಾರದು, ಕಸ ಕಡ್ಡಿ ನಿರುಪಯುಕ್ತ ವಸ್ತುಗಳನ್ನು ಕಲ್ಲಿನ ರಾಶಿ ಇಟ್ಟಿಗೆ ರಾಶಿಗಳನ್ನು ಮನೆಯ ಸುತ್ತಮುತ್ತ ಶೇಖರಿಸಿಡುವುದನ್ನು ಮಾಡಬಾರದು.

ಹಾವುಗಳ ಸಂರಕ್ಷಣೆಗೆ ಕಾನೂನು ಏನು ಹೇಳುತ್ತದೆ? 
ಭಾರತದ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಪ್ರಕಾರ ಎಲ್ಲಾ ಪ್ರಬೇದದ ಹಾವುಗಳು ರಕ್ಷತ ಉರಗಗಳೆಂದು ಘೋಷಿಸಲಾಗಿದೆ ವನ್ಯ ಜೀವಿ ಕಾನೂನು ಪರಿಧಿಯ ಶೆಡ್ಯೂಲ್ 1 ರಲ್ಲಿ ವಿನಾಶದಂಚಿನಲ್ಲಿರುವ ಪ್ರಭೇದದ ಭಾರತದ ಹೆಬ್ಬಾವು, ರೆಟಿಕ್ಯೂಲೇಟ್‍ಡ್ ಹೆಬ್ಬಾವು ಮತ್ತು ಮೊಟ್ಟೆ ಭಕ್ಷಕಹಾವುಗಳಿಗೆ ಮೊದಲ ಆದ್ಯತೆ ನೀಡಲಾಗಿದೆ
ಶೆಡ್ಯೂಲ್ 2ರಲ್ಲಿ ಕಾಳಿಂಗ ಸರ್ಪ, ನಾಗರಹಾವು, ಭಾರತದ ಕೇರೆಹಾವು, ಆಲಿವ್ ನೀರಾವು, ನಾಯಿಮುಖದ ನೀರಾವುಗಳು ರಕ್ಷಣೆಗೊಳಪಟ್ಟಿವೆ ಇವುಗಳ ಸಂರಕ್ಷಣೆಗೆ ಕಠಿಣ ಕಾನೂನು ಜಾರಿಯಲ್ಲಿದೆ ಈ ಪ್ರಕಾರ ಹಾವುಗಳನ್ನು ಕೊಂದರೆ 1 ರಿಂದ 6 ವರ್ಷಗಳ ಕಾಲ ಜೈಲುಶಿಕ್ಷೆ ಮತ್ತು 25 ಸಾವಿರ ರೂಪಾಯಿಗಳವರೆಗೆ ವಿಧಿಸಲಾಗುವುದು.
Image result for laws snakesಈ ಹಿರಿಯ ಜೀವಿಗಳು ಆಹಾರ ಸರಪಳಿಯಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಿದ್ದು ಹೆಗ್ಗಿಲ್ಲದೆ ನಿರಂತರ ಸಂತಾನೋತ್ಪತಿ ಮಾಡುವ ಇಲಿಗಳ ಸಂತಾನವನ್ನು ನಿಯಂತ್ರಣದಲ್ಲಿಟ್ಟು ರೈತ ಸ್ನೇಹಿಯಾಗಿದೆ ಅಲ್ಲದೆ ಹಲವಾರು ಮಾರಕ ರೋಗಗಳಿಗೆ ಹಾವಿನ ವಿಷವನ್ನು ಔಷಧಿಯಾಗಿ ಸಹ ಬಳಕೆಯಾಗುತ್ತಿದೆ  ಒಂದಲಾ ಒಂದು ರೀತಿ ಮಾನವನ ಬದುಕಿಗೆ ಉಪಕಾರಿಯಾಗಿರುವ ಹಾವುಗಳು ಯಾವ ದ್ವೇಷ,ಮಚ್ಚರಗಳನ್ನು ಇಡುವುದಿಲ್ಲ ಹಾವಿನ ಮೆದುಳು ಒಂದು ಉದ್ದಿನ ಕಾಳಿನಷ್ಟು ಗಾತ್ರವಿದು ಅದರ ಸಾಮಥ್ರ್ಯ ಕೇವಲ ಆಹಾರ ಮತ್ತು ಸಂತಾನೋತ್ಪತ್ತಿಗೆ ಸೀಮಿತವಾಗಿರುತ್ತದೆ,  ಭೂಮಿ ಆಚಿನ ಬಾಹ್ಯಾಕಾಶದವರೆಗೂ ನಮ್ಮ ಮೆದುಳಿನ ಜ್ಞಾನ ವಿಸ್ತರಿಸಿದೆ ಅಷ್ಟು ಆಗಾದ ಜ್ಞಾನ ಸಂಪತ್ತು ಹೊಂದಿರುವ ನಾವು ಬದುಕೋಣ ಈ ಹಿರಿಯ ಜೀವಗಳನ್ನು ಬದುಕಲು ಬಿಡೋಣ ಇದೇ ಈ ವಿಶ್ವ ಉರಗ ದಿನದ ಕಳಕಳಿಯ ಮನವಿ.



ಹಾವು ಕಚ್ಚಿದ ತಕ್ಷಣ ಯಾರೂ ಸಾಯಲ್ಲ, ವಿಷ ಕಕ್ಕಿದರೆ ಮಾತ್ರ ಸಾವು!
ಹಾವು ಕಚ್ಚಿತೆಂದು ಭಯಪಡಬೇಡಿ, ವಿಷಕಾರಿ ಹಾವುಗಳೂ ಕಚ್ಚಿದಾಕ್ಷಣ ಮನುಷ್ಯ ಸಾಯುವುದಿಲ್ಲ.
Image result for laws snakesಬಹುತೇಕ ಸಲ ಅವು ಸ್ವರಕ್ಷಣೆಗಾಗಿ ಕಚ್ಚುತ್ತವೆ. ಆದರೆ, ವಿಷ ಕಕ್ಕುವುದಿಲ್ಲ.ಹಾವಿನ ವಿಷ ದೇಹದಲ್ಲಿ ಹರಡಿ ಸಾಯುವುದಕ್ಕಿಂತ, ಹಾವು ಕಚ್ಚಿದ ಆಘಾತಕ್ಕೆ ಒಳಗಾಗಿ ಅಥವಾ ಹಾವಿನ ವಿಷಕ್ಕೆ ಪ್ರತಿರೋಧವಾಗಿ ನೀಡುವ ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದಲೇ ವ್ಯಕ್ತಿಯ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರ ಬಗ್ಗೆ ಬಹಳಷ್ಟು ಜನರಿಗಷ್ಟೇ ಅಲ್ಲ, ವೈದ್ಯರಿಗೂ ಸರಿಯಾದ ತಿಳಿವಳಿಕೆ ಇಲ್ಲ’ ‘ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ ಆಸ್ಪತ್ರೆಗೆ ಬಂದ ತಕ್ಷಣ ಹಾವಿನ ವಿಷಕ್ಕೆ ಪ್ರತಿರೋಧಕ ಚುಚ್ಚು ನೀಡುವ ಮೊದಲು ವೈದ್ಯರು, ಹಾವಿನ ವಿಷ ವ್ಯಕ್ತಿಯ ದೇಹ ಹೊಕ್ಕಿದೆಯೇ ಇಲ್ಲವೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆದರೆ, ಎಷ್ಟೋ ಸಲ ವೈದ್ಯರು ಅದನ್ನು ಗಮನಿಸದೆ ಪ್ರತಿರೋಧಕ ಚುಚ್ಚುಮದ್ದು ನೀಡುತ್ತಾರೆ. ಹಾವಿನ ವಿಷಕ್ಕಿಂತ ಪ್ರತಿರೋಧಕವಾಗಿ ನೀಡುವ ಚುಚ್ಚುಮದ್ದಿನ ಪ್ರಮಾಣ ಹೆಚ್ಚಾದರೆ ಅದು ಮೂತ್ರಪಿಂಡ ಮತ್ತು ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುತ್ತದೆ. ಹೃದಯಾಘಾತಕ್ಕೂ ಕಾರಣವಾಗುತ್ತದೆ’ ಎಷ್ಟೋ ಬಾರಿ ಹಾವು ಕಚ್ಚಿದಾಗ ಗಾಯವಾಗಿ ರಕ್ತಸ್ರಾವ ಉಂಟಾಗಿರುತ್ತದೆ. ಆದರೆ, ಶೇ 60ರಿಂದ 70ರಷ್ಟು ಹಾವುಗಳು ಕಚ್ಚಿದರೂ ವಿಷ ಕಕ್ಕುವುದಿಲ್ಲ. ಶೇ95ರಷ್ಟು ಹಾವುಗಳು ವಿಷಕಾರಿಯಲ್ಲ. ಅಪಾಯದ ಸನ್ನಿವೇಶದಿಂದ ಪಾರಾಗಲು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಚ್ಚುವ ಮೂಲಕ ಎದುರಾಳಿಗೆ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತವೆ’



ಹಾವು ರೈತ ನ ಮಿತ್ರ
ರೈತನ ಬೆಳೆಗಳನ್ನು ತಿಂದು ಹಾಳು ಮಾಡುತ್ತಿರುವ ಇಲಿಗಳನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಶಕ್ತಿ ಹಾವುಗಳಿಗೆ ಮಾತ್ರ ಇದೆ. ಹಾವುಗಳು ರೈತನ ನಿಜವಾದ ಮಿತ್ರ. ಇದನ್ನು ತಿಳಿದುಕೊಳ್ಳದ ರೈತ ಹಾವುಗಳನ್ನು ಶತ್ರುಗಳಂತೆ  ಕಾಣುತ್ತಿದ್ದಾನೆ ಎಂದು ಉರಗಪ್ರೇಮಿ ಸ್ನೇಕ್ ಸತೀಶ್ ಹೇಳಿದರು.
ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಹಾವುಗಳ ವೈಜ್ಞಾನಿಕ ಅರಿವು ಕಾರ್ಯಕ್ರಮದಲ್ಲಿ `ಸ್ಲೈಡ್‌ಶೋ'
Image result for laws snakesಮೂಲಕ ಮಾಹಿತಿ  ನೀಡಿದ ಅವರು, ಸಮೀಕ್ಷೆ ಪ್ರಕಾರ ಜೋಡಿ ಇಲಿಗಳು ಒಂದು ವರ್ಷದಲ್ಲಿ 1800 ಇಲಿಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತವೆ. ಈ ಇಲಿಗಳು ಶೇ 25ರಷ್ಟು ರೈತನ ಆಹಾರ ಬೆಳೆಗಳನ್ನು ತಿಂದು  ನಾಶಪಡಿಸುತ್ತವೆ. ಬಿಲದಲ್ಲಿ ಅಡಗುವ ಇಲಿಗಳನ್ನು ನಿಯಂತ್ರಣ ಮಾಡುವ ಏಕೈಕ ಜೀವಿ ಹಾವು ಎಂದು ಹೇಳಿದರು.ಹಾವುಗಳ ಬಗ್ಗೆ ಜನತೆಗೆ ಬಹಳಷ್ಟು ತಪ್ಪು ಕಲ್ಪನೆಗಳಿವೆ. ನಾಗರಹಾವು 12 ವರ್ಷ ದ್ವೇಷ ಸಾಧಿಸುತ್ತದೆ ಎಂಬುದು ಸುಳ್ಳು. ಈ ಹಾವು ಬದುಕುವುದೇ 8ರಿಂದ 10 ವರ್ಷ. ಇಂತಹ ಆಧಾರ ರಹಿತ ಸುದ್ದಿ ಕೇವಲ ಸಿನಿಮಾಗಳಲ್ಲಿ ಮಾತ್ರ. ನಾಗರಹಾವು ಅಟ್ಟಿಸಿಕೊಂಡು ಬಂದು ಯಾರನ್ನು ಕಚ್ಚುವುದಿಲ್ಲ.  ತನಗೆ ಅಪಾಯ ಕಂಡು ಬಂದಾಗ ಮಾತ್ರ ಕುಕ್ಕುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.ದೇಶದಲ್ಲಿ 274 ಬಗೆಯ ಹಾವುಗಳಿವೆ. ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ 160ರಿಂದ 170 ಜಾತಿ ಹಾವುಗಳಿವೆ. ಇವುಗಳಲ್ಲಿ ವಿಷಪೂರಿತ ಹಾವು ಕೇವಲ ನಾಲ್ಕು ಮಾತ್ರ ಎಂದು ತಿಳಿಸಿದರು. ನಾಗರಹಾವು ಸೇರಿದಂತೆ, ಕೊಳಕು ಮಂಡಲ, ಉರಿಮಂಡಲ ಹಾಗೂ ಕಟ್ಟು ಹಾವು  ವಿಷದಿಂದ ಕೂಡಿವೆ. ಹಾವು ಕಚ್ಚಿದ ಕೂಡಲೆ ಪ್ರಥಮ ಚಿಕಿತ್ಸೆ ಮಾಡಿಕೊಂಡು ಆಸ್ಪತ್ರೆಗೆ ತೆರಳಿ ಔಷಧಿ ಪಡೆಯಬೇಕು.



.

Comments

Popular Posts