ನನ್ನ ಕವನದ ಅವಳು


ಅವಳೆಂದರೆನೆ ಈಗೆ ಸದಾ ಕಾಡ್ತಾಳೆ.ಅವಳ ಮಾತು, ಯಾರಿಗೂ ಎದರದ ದಿಟ್ಟತನ, ಜಾಣ್ಮೆ, ಸದಾ ಲವಲವಿಕೆಯ ಜಾದು, ಅವಳ ಈ ಗುಣಗಳಿಗೆ ಬಂದಿಯಾಗಿ ಅವಳ ಕುಪ್ಪಸಕ್ಕೆ ಸೆರೆಯಾದವನು ನಾನು.ಯಾರ ಮಾತನ್ನು ಕೇಳದೆ ನನ್ನ ಮಾತನ್ನ ಎಲ್ಲರೂ ಕೇಳುವಾಗ ಅನ್ಯರ ಮಾತು ಕೇಳುವ ಅಗತ್ಯವಿಲ್ಲವೆಂಬ ಭಾವನೆಯಲ್ಲಿದ್ದ ನನಗೆ ಇವಳ ನುಡಿಮುತ್ತುಗಳ ಸರಪಾಳಿಯನ್ನ ಬಿಡಿ ಬಿಡಿಯಾಗಿ ಕುತೂಹಲದಿ ಕೇಳುವಾಗೆ ಮಾಡಿದವಳು.ಅವಳ ಮೇಲಿದ್ದ ಆಸೆ ಆಕಾಂಕ್ಷೆ ಕನಸ್ಸುಗಳ್ಳನ್ನ ಬದಿಗಿಟ್ಟು ನನ್ನ ಗುರಿಯೆಡೆಗೆ ಪಯಣ ಸಾಗುತ್ತಿರುವ ನನ್ನದು ,ಇತ್ತೀಚೆಗೆ ಬಿಡುವಿಲ್ಲದ ಬದುಕು.ಆದರೂ ಬಿಡುವಿನ ಅವದಿಯಂತಿದ್ದೇಇರುತ್ತಲ್ಲ ಆ ಮಧ್ಯೆ ಅವಳ ನೆನೆಪುಎಡಬಿಡದೆ ಕಾಡುತ್ತದೆ.ಹೇಳಿಕೊಳ್ಳಬಹುದಾದಂತವನೆಲ್ಲ ಹೇಳಿಕೊಂಡು ದುಕ್ಕದಾಹ ತೀರಿಸಿಕೊಳ್ಳುವೆ ಇನ್ನ ಹೇಳಲಾಗದ ಇನ್ನು ಎಷ್ಟೋ ನೋವುಗಳು ನನ್ನ ಗಾಳಿಗಂಟಿದ ಉಸಿರ ರೀತಿ ಮನಕ್ಕಂಟಿದೆ.ಇವಳೇ ತುಂಬಿದ ನನ್ನ ಬದುಕೀಗ ಧ್ವಂದ್ವ ವಾಗಿ ಸಾಲು ಸರದಿಯ ಪ್ರಶ್ನೆಯಾಗಿದೆ.ಕಣ್ಣಿಗೆ ಒಮ್ಮೆ ಕಂಡು ಮನಸ್ಸಿಗೆ ಅತಿಬೇಗನೆ ನಾಟಿದ ಮಂಜಿನ ಚೂರಿ ಅವಳು ಅವಳ ನೆನೆಪು ಎಂತ ದುಃಕ್ಕವನ್ನೂ ತಣಿಸುವುದು.ಆದರೆ ಈ ನಡುವೆ ಅವಳ ಅಗಲು ವಿಕೆಯ ದಿನ ಅತ್ತಿರ ಬಂದಂತೆ ಎಲ್ಲ ನೋವನ್ನು ತಣಿಸುವ ಮದ್ದೀಗ ಪಾಷಾಣದಂತಾಗಿದೆ. ನಾ ಬಯಸಿದ ಎಲ್ಲವೂ ನನ್ನ ಬಳಿ ಬರುತ್ತಿರುವದಿನಗಳಿಗೆ ಸೆಡ್ಡು ಹೊಡೆದು ಸವಾಲಾಗಿ ನಿಂತ ಇವಳು ನನ್ನ ಕವನದ ಅವಳು

ಅಂದೊಂದು ಬೇಸರದ ದಿನ ಬೆಳಗ್ಗೆ ತಡವಾಗಿ ಎದ್ದೆ ರಾತ್ರಿಇಡಿ ಮೊಬೈಲ್ನ ನಶೆಯಲ್ಲಿ ತೂರಾಡುತ್ತ ನಿದ್ದೆ ಇಲ್ಲದೆ ಮಾರನೆ ದಿನ ಮಂಕು ಕವಿದಿತ್ತು.ಕಾಲೇಜಿಗೆ ಹೋಗಬೇಕಾ ಬೇಡವೋ ಅನ್ನುವ  ಗೊಂದಲದಲ್ಲಿ ಇದ್ದೆ ತಕ್ಷಣ ಸ್ನೇಹಿತೆಯಿಂದ ಕರೆ ಬಂದಿತ್ತು.ಇಂದು ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮವಿದೆ ನೀನು ವಂದನಾರ್ಪಣೆ ಮಾಡವೆಯ ಎಂದಾಗ ಮುಖದಲ್ಲಿ ಮಂದಹಾಸ ಮೂಡಿತು.ಎಂತ ಪರೀಕ್ಷೆ ಇದ್ದರು ನಿರೂಪಣೆ ಭಾಷಣವೆಂದರೆ ಎಲ್ಲಿಲ್ಲದೆ ಆಸಕ್ತಿ ಒಪ್ಪಿಕೊಂಡು ಅಮ್ಮ ಮಾಡಿದ್ದ ಚಿತ್ರಾನ್ನ ತಿಂದು ಬೇಗ ಕಾಲೇಜಿನತ್ತ ಪಯಣ ಸಾಗಿತ್ತು.ನಂದು ಚಂಚಲ ಮನಸ್ಸು ಯಾವುದೇ ವಿಷಯವಾಗಲಿ ತುಂಬಾ ದಿನ ಉಳಿಯುವುದಿಲ್ಲ ತಕ್ಷಣಕ್ಕೆ ತುಂಬಾ ಗೊಂದಲನವನ್ನು ಉಂಟುಮಾಡಿ ಕಿರಿ ಕಿರಿ ಮಾಡುತ್ತವೆ ಅಸ್ಟೆ. ಇವಳು ನಾ ಕಂಡ ಒಬ್ಬಳ ಫೈಕಿ ಇವಳು ಎರಡನೇ ಅವಳು,ಈಗಾಲೇ ಪ್ರೇಮ ವೈಫಲ್ಯದಿಂದ ಬಳಲಿ ಆ ವಿಚಾರವನ್ನೇ ಮರೆತಿದ್ದೆ.ಮೊದಲನೆ ಅವಳ ನವ್ಯ ನೆನಪುಗಳು ಹಳೆಯದಾಗುತ್ತಿದ್ದವು.ಒಂದರ್ಥದಲ್ಲಿ ಮರೆತಿದ್ದೆ ಅನ್ನಬಹುದು.ಹಸಿ ನಿಸಿಯಲ್ಲಿ ಕಾಲೇಜು ತಲುಪಿದೆ.ಕಾರ್ಯಕ್ರಮ ಪ್ರಾರಂಭವಾಯಿತು ಭಾಷಣವು ಮುಗಿದಿತ್ತು ಅವಳನ್ನ ಮೊದಲು ನೋಡಿದ್ದೆ ಅಲ್ಲಿ ಆದರೆ ಅಂತ ಯಾವ ಸಿಹಿಸೂಚನೆ ಅಥವ ಈ ರೀತಿ ನನ್ನ ಮನಸ್ಸಿಗೆ ನಾಟುತ್ತಿದ್ದಳು ಅಂತ ಕನಸ್ಸಿನಲ್ಲೂ ಅಂದು ಕೊಂಡಿರಲಿಲ್ಲ. ಆದರೂ ಒಂದು ಕಣ್ಣು ಮತ್ತೆ ಹಿಂದೆ ತಿರುಗಿ  ನೋಡಿತ್ತು ಅವಳನ್ನ.. ಈ ಮಂಕು ಬಡೆದ ಮನಸ್ಸು ಚಿಗುರೊಡೆಯಲು ಪ್ರಾರಂಭವಾಯಿತು.
ಎನ್.ಎಸ್.ಎಸ್ ಸ್ವಯಂಚಾಲಕನಾಗಿದ್ದ ನನಗೆ ಇಂತಹ ಕಾರ್ಯಗಳಲ್ಲಿ ನನ್ನ ವಿದ್ಯಾಭ್ಯಾಸಕ್ಕಿಂತ ಚಿಕ್ಕಂದಿನಿಂದಲೂ ತುಂಬಾ ಆಸಕ್ತಿವಹಿಸುತ್ತಿದ್ದೆ,ನಿರೂಪಣೆ ಭಾಷಣ,ನಾಟಕ, ನಿರ್ದೇಶನ ಕಾರ್ಯಕ್ರಮಗಳ ಉಸ್ತುವಾರಿ ಮೇಲ್ವಿಚಾರಣೆ
ಇಂತವುಗಳ ಕಡೆ ಗಮನ ಹೆಚ್ಚು,ಯಾರಿಗೂ ಬಿಟ್ಟುಕೊಡಬಾರದೆಂದು ನನ್ನ ಮನಸ್ಸು ಹೇಳಿದರು ಎಲ್ಲೋ ಒಂದು ಕಡೆ ನನ್ನ ಒಳ್ಳೆತನ ಅವುಗಳನ್ನ ಕಿತ್ತುಹಾಕುತ್ತಿತ್ತು.ಈಗಿರುವಾಗ ಮುಂದಿನ ವಾರ ಎನ್ ಎಸ್ ಎಸ್ ವಾರ್ಷಿಕೋತ್ಸವ ಇರುತ್ತದೆ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿರೆಂದು ಸಂದೇಶ ಬಂತು….ನನಗೆ ಭಾಷಾಭಿಮಾನ ಜಾಸ್ತಿ ಇತ್ತು ಕನ್ನಡ ವಿಚಾರಕ್ಕೆ ಬಂದಾಗ ರಕ್ಷಿತ್ ಅನ್ನುತ್ತಿದ್ದರು. ಸ್ಕ್ರಿಪ್ಟ್ ಬರೆಯುವುದು ಕವನ,ಕಥೆ ಇವುಗಳ ವಿಚಾರ ಬಂದಾಗ ಎಷ್ಟೋ ಜನಕ್ಕೆ ಸಹಾಯ ಮಾಡಿರುವೆ ಅದೇ ರೀತಿ ಎಲ್ಲವನ್ನು  ನೀವೇ ಮಾಡುವುದಕ್ಕಿಂತ ನಿಮ್ಮ ಕಿರಿಯರನ್ನ ಸೇರಿಸಿಕೊಂಡು ಒಟ್ಟಾಗಿ ಮಾಡಿರಿ ಎಂದು ಗುರುಗಳು  ಸಲುಹೆ ನೀಡುವರು ಅಂತೆಯೇ ಅವಳು ಸ್ವಾಗತ ಭಾಷಣವನ್ನ ಮಾಡುವುದಾಗಿ ಒಪ್ಪಿಕೊಳ್ಳುತ್ತಾಳೆ.ಶಾಲಾ ದಿನಗಳಲ್ಲಿ ಮಾಡಿರುತ್ತಳಾದರು ಕನ್ನಡದಲ್ಲಿ ಇದೆ ಮೊದಲು ಎಂದು ನನ್ನ ಸಹಾಯವನ್ನ ನಿರೀಕ್ಷಿಸುವಳು..ಯಾರಿಗೂ ಅಷ್ಟಾಗಿ ಕಿವಿ ಕೊಡದ ನನೆಗೆ ಅವಳ ವಿಶ್ವಾಸದಾಯಕ ಮಾತುಗಳು ಗೌರವ ಪೂರ್ವಕ ನುಡಿಗಳು ನನ್ನಲ್ಲಿರುವ ಕಲೆಗೆ ಬೆಳೆಕೊಟ್ಟಂತೆ ಭಾಸವಾಯಿತು ಸ್ವಾಗತ ಭಾಷಣ ಹೇಗೆ ಮಾಡೋದು ಇದಕ್ಕೆ? ನೀವು ಸಹಾಯ ಮಾಡುವಿರ ಎಂದಳು ಹಾಗ ಹಾ ಕಂಡಿತ ಮಾಡುವೆ ಎಂದೆ ನಾಳೆ ನಿನಗೆ ಬರೆದು ನಾ ಕಳಿಸುವೆ.ಎಂದು ಸಂಕೋಚದಿಂದ ಇಂತಿರುಗುತ್ತಿದ್ದೆ.ಅಷ್ಟರಲ್ಲೇ……..ನಂ ಇಲ್ಲದೆ ಹೇಗೆ ಕಳುಸುವಿರಿ ನನ್ನ ನಂ ತಗೊಳಿ ಎಂದಳು ಹಾ ಹೌದಲ್ಲ ಎಂದು ನಂ ತೆಗೆದು ಕೊಂಡೊದೆ.ಕೆಲಸ ಕಾರ್ಯಗಳಲ್ಲಿ ರಾತ್ರಿಯ ತನಕ ತಲ್ಲೀನನಾಗಿದ್ದ ಕಾರಣ ಇವಳ ಸ್ಕ್ರಿಪ್ಟ್ ಬರೆಯಲಾಗುವುದಿಲ್ಲ.ಮರತೆಹೋಗಿತ್ತು,ಮೆಸೇಜ್ ಮೂಲಕ ಜ್ಞಾಪಿಸಿದಳು ಓ ಸಾರಿ ನಾನು ಸ್ವಲ್ಪ ಬ್ಯುಸಿ ಇದ್ದೆ ಕಣ್ರೀ ಐ ಎಂ ರಿಯಲಿ ಸೋರಿ ನಾಳೆ ಕಂಡಿತ ನಿಮಗೆ ಬರೆದು ಕೊಡುವೆ ಎಂದೆಹೌದ ಸರಿ ಆಯ್ತು ರಕ್ಷಿತ್ ಎಸ್ಟೋತ್ತಿಗೆ ಸಿಗುವಿರಿ ಎಂದಳು ನಾನು ಬೆಳೆಗ್ಗೆ 8:00 ಕ್ಕೆ ಕಾಲೇಜಿನ ಕ್ಯಾಂಟೀನ್ ಗೆ ಬನ್ನಿ ಅಲ್ಲೇ ಬರೆದುಕೊಡುವೆ ಎಂದೆ. ಹಾಗ ಸರಿ ಆಯ್ತು ರಕ್ಷಿತ್ ಎಂದು ಸ್ಮೈಲ್ ಸಿಂಬಲ್ ಅವಳ ವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ನನಗೂ ಎಲ್ಲೋ ಒಂದು ಕಡೆ ಪ್ರೀತಿಯ ಸೂಚನೆ ಕಂಡಿತ್ತು.ನನಗೆ ಇವಳು ಇನ್ನೊಂದು ಅನುಭವ ಅನ್ನುವುದಕ್ಕಿಂತ ಜೀವನದ ಒಂದು ಅತ್ಯಮೂಲ್ಯ ಪಾಠ ,ಒಂದು ಆದರ್ಶ ವಾಗುತ್ತಾಳೆ ಎಂದು ತಿಳಿದಿರಲಿಲ್ಲ, ಇವಳು ನನ್ನ ಜೀವನಕ್ಕೆ ಒಳ್ಳೆ ಸ್ನೇಹಿತೆಯಾದರು ಇವಳು ಬರುವ ತನಕ ನಾನು ಪ್ರಬುದ್ಧತತೆಗೆ ಬಂದಿರಲಿಲ್ಲವೆಂಬುವುದು ನಿಜ ಅಂತಹ ಮನಸ್ಸು ಯೋಚಿಸುತ್ತಿದ್ದ ಬಗೆ ತುಂಬ ಮಗುವಾಗಿತ್ತು ಹೇ ಇವಳು ನನಗೆ ಒಲಿಯುವಂತಿದ್ದಾಳೆ ಎಂದೆನಿಸಿತು ನಾಳೆ ಟಿಫನ್ ಕ್ಯಾಂಟೀನ್ ಅಲ್ಲಿ ಮಾಡುವ ಮನೇಲಿ ತಿನ್ನಬೇಡ ಹಾಗೆ ಬಾ ಎಂದೆ. ಆದರೆ ಇವಳು ಎಲ್ಲರಂತಲ್ಲ ನನ್ನ ಕಲ್ಪನೆಗೆ ಮೀರಿ ಬದುಕುತ್ತಿರುವಳಿವಳು ಹೆಮ್ಮೆಯಿಂದ ಹೇಳುವೆ ನನ್ನ ಕವನದ ಅವಳು.ಈಗಾಗಲೇ ಇಂತಹ ವಿಷಯದಲ್ಲಿ ನೊಂದ ಅವಳಿಗೆ ನನ್ನ ಪ್ರೀತಿ ಅನ್ನುವುದಕ್ಕಿಂತ ಆಕಷಣೆಯ ವಿಚಾರದ ಅರಿವು ಮೂಡಿತ್ತು ಅಂತ ಕಾಣುಸಿತ್ತೋ ಏನೋ ನಾನು ತಿನ್ನದೆ ಬಂದರೆ ಅಮ್ಮ ಗೇಟ್ ಬಾಗಿಲು ತೆಗೆಯೋದೆ ಇಲ್ಲ ನೆಕ್ಸ್ಟ್ ಟೈಮ್ ತಿನ್ನೋಣ ಎಂದು ನನ್ನ ಮೊದಲ ಹೆಜ್ಜೆಗೆ       ಲಗಾಮು ಹಾಕಿದಳು.ಆದರೆ ನಾನೆಸ್ಟೆ ಅವಳ ಅತ್ತಿರ ಹೋಗುತ್ತಿದ್ದರು ಅವಳು ಎಂದಿಗೂ ನನ್ನ ಮೇಲಿದ್ದ ಅಂದಿನ ವಿಶ್ವಾಸ ಇಂದಿಗೂ ಹಾಗೆಯೇ ಇದೆ.ನಾನಿಷ್ಠೆ ಕೆಲವೊಮ್ಮೆ ಬೇಸರ ತಂದರು ಅವಲದನ್ನ ತೀವ್ರವಾಗಿ ಪರಿಗಣಿಸಿದ್ದೆ ಇಲ್ಲ ಆಗೇನಾದರು ಆಗಿದಿದ್ದರೆ ಇಷ್ಟೋತ್ತಿಗೆ ನನ್ನ ಕೈಮೀರಿ ಹೋಗುತ್ತಿದ್ದಳು ಅಂತ ತಾಳ್ಮೆ, ಸಹನೆ ,ಸಹೃದಯ ನನ್ನವಳದ್ದು ನನ್ನ ಕವನದ ಅವಳದ್ದು.
ಈಗೇ ನಮ್ಮ ಪಯಣ ಸಾಗತೊಡಗಿತು ಅಂದಿನಿಂದ ಇಲ್ಲಿಯ ತನಕ ಒಂದು ದಿನವೂ ಅವಳೊಂದಿಗೆ ಮಾತನಾಡದೆ ಇಲ್ಲ.ನಾನು ಯಾವುದಕ್ಕೂ ಎದರುತ್ತಿರಲಿಲ್ಲ ಯಾವುದೇ ಸಂದರ್ಭವನ್ನ ಬಹಳ ಸುಲಭವಾಗಿ ಪರಿಹರಿಸ ಬಹುದಾದ ಕೌಶಲ್ಯ ನನ್ನಲ್ಲಿತ್ತು.ಆದರೆ ನನ್ನ ಪ್ರೀತಿಯನ್ನ ಇಲ್ಲಿಯವರೆಗೂ ಹೇಳದಂತೆ ಮಾಡಿದ ಅವಳ ಜಾಣ್ಮೆಯನ್ನ ಮೆಚ್ಚಲೇಬೇಕು. ಆಗಂತ ನನಗೆ ಧೈರ್ಯವಿಲ್ಲವೆಂದಿರಲಿಲ್ಲ ನಾನಂತ ಕಾರ್ಯಕ್ಕೆ ಕೈಹಾಕುವಾಗಲೆಲ್ಲ ಅವಳು ಅದನ್ನ ಜಾಣ್ಮೆ ಇಂದ ತಡೆಯುತ್ತಿದ್ದಳು,ಮಚ್ಚ ಇವ್ನು ನಂಗೆ ಪ್ರಪೋಸ್ ಮಾಡಿದ ತೂ ಅದೇನ್ ಅಂತ ಲವ್ ಹುಟ್ಟುತ್ತೋ ಇವರಿಗೆಲ್ಲ ಅವರ ಮಕ ಮುಚ್ಚ! ಅವರ ಶೋಕಿಯ ಪ್ರೀತಿ ಬದುಕಿಗೂ ನನ್ನ ಕಲ್ಪನೆಯ ಪ್ರೀತಿಗೂ ಬಾರಿ ವ್ಯತ್ಯಾಸವಿತ್ತಾದರು ಈ ಮಾತುಗಳನ್ನ ಕೇಳಿದಾಗ ಎಲ್ಲೋ ನನ್ನಲ್ಲಿದ್ದ ವಿಶ್ವಾಸ ಕುಗ್ಗತೊಡಗಿತು...ಇವಳು ಬರುಬರುತ್ತಾ ತೀರ ಅತ್ತಿರವಾದಳು ನನ್ನ ಮೇಲೆ ವಿಶ್ವಾಸವಿತ್ತು.ಆದರೆ ನನಗೆ ಪ್ರೀತಿ ಮನದಲ್ಲಿ ಚಿಗುರೊಡೆದಿತ್ತು.ಆದರೆ ಇಂದಿಗೂ ಎಂದಿಗೂ ನನ್ನ ಪ್ರೀತಿ ಅವಳಿಗೆ ಹೇಳಲಾಗದೆ .ಹೇಳಲುಬಾರದ,ಈಗಾಗಲೇ ಗೊತ್ತಿರುವ, ಇದೊಂದು ವಿಚಿತ್ರವಾದ ಪ್ರೀತಿ ಅನ್ನಬಹುದು ಅವಳು ವಿಚಿತ್ರ ಅನ್ನುವುದಕ್ಕಿಂತ ವಿಭಿನ್ನ ಅಂದರೆ ಆ ಪದ ಅವಳಿಗೆ ಸೂಕ್ತ ಅವಳ ಅಲೋಚನೆಗಳಾಗಲಿ,ಮಾಡುವ ಕಾರ್ಯ,ಅವಳ ನಡುವಳಿಕೆ ಅವಳ ಕೈ ಯಾವತ್ತಿಗೂ ಕೈ ಮೀರಿದ್ದಿಲ್ಲ. ಈಗೆ ಒಡನಾಟ ಮುಂದವರಿಯುತ್ತಾ ಒಯಿತು. ಇವಳ ಮಾತುಗಳು ನನಗೆ ಕುತೂಹಲ ಮೂಡಿಸುತ್ತಿತ್ತು ನಮ್ಮ ನಮ್ಮದ್ದು ಒನ್ಲೈನ್ ಒಡನಾಟ.ಅದನ್ನ ವರುತು ಪಡೆಸಿ ನಮ್ಮ ಒಡನಾಟ ಒಂದು ಕಾಫಿ ಕುಡಿಯುವ ಅಂತಕ್ಕೂ ಇರಲಿಲ್ಲ.ಬರು ಬರುತ್ತ ಭಾವನೆಗಳು ತಕದಿಮಿ ಎಂದು ಎದೆಯಲ್ಲಿ ಕುಣಿಯ ತೊಡಗಿದವು ಚಿಗುರೋಡೆದ ಪ್ರೀತಿ ಈಗ ಗಿಡವಾಗಿ ನಿಂತಿದೆ. ಮುಂದೆ ಹೆಮ್ಮರವಾಗುತ್ತದೆ.ಈಗೆ ಇರಬೇಕಾದರೆ ಒಂದು ದಿನ ನಮ್ಮ ನಡುವೆ ಪ್ರೀತಿ ಪ್ರೇಮದ ಬಗ್ಗೆ ಮಾತು ಕಥೆ ಶುರುವಾಗುತ್ತದೆ, ಅವಳ ಮನಸಲ್ಲಿ ಈಗಾಗಲೇ ಒಮ್ಮೆ ಪ್ರೀತಿಯಲ್ಲಿ ನೊಂದ ಅವಳಿಗೆ ಇವುಗಳಲ್ಲಿ ಆಸಕ್ತಿ ಇರಲಿಲ್ಲ.ಇವಳ ಮುಖ್ಯ ಗುರಿ ಒಂದೊಳ್ಳೆ ನೌಕರಿ ಪಡೆದು ತನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನೃತ್ಯ ಕಲೆಯನ್ನ ಮುಂದುವರಿಸಬೇಕೆಂಬಹುದು  ಅಗಲೇ ಹೇಳಿದಹಾಗೆ ಈಕೆ ದಿಟ್ಟೆ ಯಾರಿಗೂ ಎದರುತ್ತಿರಲಿಲ್ಲ ಮಾನಸಿಕವಾಗಿ ಗಟ್ಟಿ ಸ್ವಭಾವದವಳು….ಈ ವಿಷಯದ ಕುರಿತು ಹೆಂದಿನ ರಾತ್ರಿ ಚರ್ಚೆಯಾಗಿತ್ತು,ಮಧ್ಯಾಹ್ನ ನಾನು ಅವಳನ್ನ ನೋಡಲೆಂದು ಅವಳ ತರಗತಿಯ ಬಳಿ ಹೋದೆ….ಕಾರಿಡಾರ್ ಅಲ್ಲಿ ನಿಂತು ಮಾತನಾಡುತ್ತಿದ್ದೆವು ಅಷ್ಟರಲ್ಲಿ ಕಾಲೇಜಿನ ಹಿರಿಯ ವರ್ಷದ ವಿದ್ಯಾರ್ಥಿಗಳು ಅಲ್ಲಿಗೆ ಬಂದು..ಹೇ ಹೇಳಮ್ಮ ನಿನ್ನೆ ನಂಬಿದಾನೆ….ಎಂದು ಇದ್ದ ಮೂವರಲ್ಲಿ ಒಬ್ಬ ಹೇಳಿದ.ಇವಳು ಮೌನ ವಾಗಿ ಏನು ಮಾತನಾಡದೆ ಸುಮ್ಮನಿದ್ದಳು…….
ಹೇ ಏನಿದು ಏನಾಗುತ್ತಿದೆ ಯಾಕ್ ಅವ್ನು ಹಾಗ್ ಹೇಳ್ತಿದ್ದಾನೆ ಇಸ್ಟ್ ಜನದ ಮುಂದೆ ಅಂದಾಗ .ಹಾ ರಕ್ಷಿತ್ ಅವನು ನೆನ್ನೆ ನನಗೆ ಪ್ರಪೋಸ್ ಮಾಡಿದ ಅಂದಾಗ ಒಮ್ಮೆ ಮನಸ್ಸು ಅಲ್ಲೋಲ ಕಲ್ಲೋಲ ಒಂದು ಕಡೆ ಗಾಬರಿ ಬಹುಶ ನಿನ್ನ ಹಳೆಯ ಪ್ರೀತಿ ಕೈಬಿಟ್ಟು ಹೋದಾಗಲೂ ಇಷ್ಟು ಬೇಸರವಾಗಿರಲಿಲ್ಲ ಅಷ್ಟು ಬೇಸರ ಆಯಿತು ಅವನ ಮೇಲೆ ಎಲ್ಲಿಲ್ಲದ ವ್ಯರ್ಥ ಕೂಪ ತಾಳು ನಾನು ಅವನನ್ನ ಮಾತುಡುವೆ ಎಂದು ಮುಂದಾದಗ ಬೇಡ ರಕ್ಷಿತ್ ಇದನ್ನ ಐ ಕೆನ್ ಮ್ಯಾನೇಜ್ ಅಂದಳು ಸುಮ್ಮನಾದೆ ಇದಾದ ಮಾರನೇ ದಿನ ನಾನು ಲ್ಯಾಬ್ ಮುಗಿಸಿ ಕೊಂಡು ಹೊರ ಬಂದೆ ಅಲ್ಲೊಂದು ನನಗೆ ಎದೆ ಹೊಡೆಯುವಂತಹ ದೃಶ್ಯ ಕಾಯುತ್ತಿತ್ತು.ನಾನು ಬರುತ್ತಿದ್ದ ಅದೇ ದಾರಿಯಲ್ಲಿ ಪ್ರಪೋಸ್ ಮಾಡಿದವನು ಮತ್ತೆ ನನ್ನವಳು ಇಬ್ಬರು ನಿಂತು ಮಾತನಾಡುತ್ತಿರುತ್ತಾರೆ.ಮನಸ್ಸಿಗೆ ಒಂದು ರೀತಿಯ ಜಿಗುಪ್ಸೆ ಆರಂಭವಾಯಿತು ನಾ ಬಯಸಿದ್ದು ನಂಗೆ ಸಿಗಲೇ ಬಾರದೆಂದು ಅವನು ನಿರ್ದಾರ ಮಾಡಿಯೇಬಿಟ್ಟಿರಬೇಕು….ಎಂದು ಮನದಲ್ಲಿ ನೆನೆದು ಮನೆಗೆ ಹೋದೆ, ಪುಸ್ತಕ ಬಿಸಾಕಿ ಅಸಿಗೆ ಮೇಲೆ ಮಲಗಿ ಗಟ್ಟಿ ಯಾಗಿ ಅತ್ರೆ ಇದು ನನ್ನ ಮನಸ್ಸಿನ ಮೊದಲನೆ ಅಳು ಅನ್ನಬಹುದು,ಅಷ್ಟರಲ್ಲೆ ಟಿಂಗ್ ಟಿಂಗ್ ಮೆಸೇಜ್ ಸದ್ದು ಮಚ್ಚ ಅವನು ಇವತ್ತು ಸಿಕ್ಕಿದ್ದ ಕರೆದು ಮಾತನಾಡಿಸಿದ ಸ್ವಲ್ಪ ಮನಸ್ಸು ಹಿಡಿತಕ್ಕೆ ಬಂತಾದರು ಕೈ ಬಿಡದ ಕಾರ್ನರ್ ಜಿಗುಪ್ಸೆ.ಏನಂತೆ ಅವನದ್ದು ನಾನು ನಿಮ್ಮನ್ನ ನೋಡಿದೆ ಮಾತಾಡಬೇಕು ಅಂತ ಅನ್ನಿಸಲಿಲ್ಲ ಎಂದೇ ಹೌದ ಸರಿ ಎಂದಳು ಮಾತು ಮೌನ ತಾಳಿತು ಒಂದು ರೀತಿ ಗೊಂದಲದ ಮನಸ್ಥಿತಿ ಏನು ಮಾತಾಡಬೇಕು ಏನು ಹೇಳಬೇಕು ನನ್ನ ಮನಸ್ಸಿನ ವೇದನೆ ಮತ್ತೆ ಒಂಟಿಯಾಯಿತಲ್ಲ ಎಂಬ ಭಾವನೆ ಮತ್ತೆ ಮತ್ತೆ ಕಾಡಲಾರಂಭಿಸಿತು ಮತ್ತೆ ಸುಮ್ಮನಿರದ ಮನಸ್ಸು ಹೇ ಸಾರಿ ಕಣೆ ನಂಗೆ ನೀನ್ ಅವ್ನ್ ಜೋತೆ ಮಾತಾಡ್ತಿದದ್ದು ಅಸ್ಟೆನ್ ಇಸ್ಟ ಆಗ್ಲಿಲ್ಲ ಬೇಜಾರಾಯ್ತು ಎಂದೆ ಅದಕ್ಕೆ ನಂಗೇನ್ ಬಾರಿ ಆಯ್ತು ನೋಡು ಇಬ್ಬರು ಒಟ್ಟಿಗೆ ನಿಂತು ಮಾತನಾಡಿದರೆ ಏನೆಲ್ಲ ಕಲ್ಪನೆ ನಿನ್ನದು ಅಂತ ವ್ಯಂಗ್ಯವಾಡುವಳು. ಆದರೂ ಒಂದು ಕಡೆ ಬೇಸರ ಹೋಗಿರಲಿಲ್ಲ
ಅದೇನೋ ಗೊತ್ತಿಲ್ಲ ಅವಳು ನನ್ನೊಡನೆ ಇರುತ್ತಿದ್ದ ರೀತಿಯನ್ನ ನೋಡಿ ನನ್ನ ಕಲ್ಪನೆಯ ಹುಡ್ಗಿ ಇವಳ ಎಂದು ಭಾಸವಾಗುತ್ತಿತ್ತು.ಆದರೆ ಅಗೆಂದು ಕೊಂಡ ಕೆಲವೇ ದಿನಗಳು ಅಥವ ನಿಮಿಷಗಳಲ್ಲಿ ಮಾಯೆಯಂತೆ ಎಲ್ಲವೂ ನನ್ನ ನೀರೀಕ್ಷೆಣೆ ಕೈ ತಪ್ಪಿ ಹೋಗುವಂತೆ ಆಡುತ್ತಿದ್ದಳು.ಅವಳು ನನ್ನಿಂದ ದೂರ ಸರಿಯುತ್ತಿದ್ದಾಳ ಎಂದು ಎಸ್ಟೋಬಾರಿ ಅನ್ನಿಸಿದ್ದಿದೆ ಆದರೆ ಅಗೆಂದುಕೊಳ್ಳುವಸ್ಟರಲ್ಲೇ ಇವೆಲ್ಲ ಸುಳ್ಳು ಆಕೆ ನನ್ನ ಜೊತೆ ಸದಾ ಇರುವಳು ಅನ್ನುವ ಬರವಸೆಯನ್ನ ಪರೋಕ್ಷವಾಗಿ ಕೊಡುತ್ತಿದ್ದಳು.ಮೊದಲೇ ಗೊಂದಲ ದಿಂದ ಮನಕೆಟ್ಟಿದ್ದ ನನಗೆ ಇವಳ ಗುಂಗಲ್ಲೇ ದಿನನಿತ್ಯ ತಲೆ ಕೆಡಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ಅತ್ತಿದ್ದು ಉಂತು ಇದಾದ ಒಂದು ವಾರಕ್ಕೆ ಎನ್ ಎಸ್ ಎಸ್ ಒಂದು ದಿನದ ಗಿಡ ನೆಡುವ ಶಿಬಿರವನ್ನ ಅಮ್ಮಿಕೊಂಡಿದ್ದೆವು.ಮುಖ್ಯ ಜವಾಬ್ದಾರಿ ಮೇಲ್ವಿಚಾರಣೆ ನನಗೆ ವಾಯಿಸಿದ್ದರು ನಮ್ಮ ಊರಿನಲ್ಲೇ ಹಿರಿಯರು ಮುಖಂಡರು ಅಧ್ಯಕ್ಷರ ಸಹಾಯಾದಿಂದ ಕಾರ್ಯಕ್ರಮ ನಾನೇ ಸ್ವತಃ ನಡೆಸಿಕೊಡುವುದಾಗಿ ಹೇಳಿದರು.ಅಂತೆಯೇ ಒಪ್ಪಂದ ಮಾಡಿಕೊಂಡಿದ್ದೆ,ಇವಳನ್ನ ನಮ್ಮ ಮನೆಗೆ ಕರೆದುಕೊಂಡು ಹೋಗುವ ಅಂಬಲದಲ್ಲಿ ಕ್ಯಾಂಪ್ ನ ಹಿಂದಿನ ದಿನ ತಿಳಿಸಿದ್ದೆ ಮಚ್ಚ ನಿಮ್ಮ ಮನೆಗೆ ಕರೆದುಕೊಂಡು ಹೋಗು ಎಂದು ಅವಳು ಒಪ್ಪಿಗೆ ಸೂಚಿಸಿದ್ದಳು,ಕಾರ್ಯಕ್ರಮ ತಡವಾಗಿ ಆದ ಕಾರಣ ಬಿಡುವಿನ ಅಭಾವದಿಂದ ಆ ಕಾರ್ಯ ನೆರವೇರಲೇ ಇಲ್ಲ.ಸಮಯ ಅಗಿತ್ತು ಅಲ್ಲಿಯೇ ನಮ್ಮೂರ ದೇವಸ್ಥಾನದ ಚೌಕಟ್ಟಿನ್ನಲ್ಲಿ ಅಂತ್ಯಾಕ್ಷರಿ ಹಾಡುತ್ತಾ ಕಾಲೇಜ್ ಬಸ್ಸಿಗಾಗಿ ಕಾಯುತ್ತ ಸಂಭ್ರಮ ದಿಂದ ಇದ್ದೆವು.ಕಾಲೇಜ್ ಬಸ್ ಬಂದಿತು ಮೇಲ್ವಿಚಾರಣೆ ಜವಾಬ್ದಾರಿ ನನ್ನ ಮೇಲಿದ್ದ ಕಾರಣ ಕಾಲೇಜಿಗೆ ನಾನು ಹೋಗಿ ಸಾಮಗ್ರಿಗಳನ್ನ ಜೋಪಾನವಾಗಿ ಇಡಬೇಕಿತ್ತು ಆದ ಕಾರಣ ಪುನಃ ಕಾಲೇಜಿಗೆ ಹಿಂತಿರುಗಿದೆ. ಕಾಲೇಜಿನ್ನಲ್ಲಿ ಕೆಲಸ ಮುಗಿಸಿ ಹೊರಡೋಣವೆನ್ನುವಷ್ಟರಲ್ಲಿ ಅವಳು ಮತ್ತು ಅವನ ಆಪ್ತಗೆಳೆಯ ಇಬ್ಬರು ಗಾಡಿಯಲ್ಲಿ ಹೊರಡಲು ಸಿದ್ಧವಾಗಿದ್ದರು.ಇಲ್ಲಿ ಅವನ ಆಪ್ತ ಗೆಳೆಯನ ಬಗ್ಗೆ ಹೇಳಲೇ ಬೇಕು ನನಗೂ ಅವನು ಗೆಳೆಯನೇ.ಏನೇ ನೋವು ನಲಿವಿದ್ದರು ಅವನು ತಾನೇ ಕೇಳಿ ಸಮಾದಾನ ಮಾಡುವನು ಇಲ್ಲಿಯವರೆಗೂ ಆ ಕಾರ್ಯ ಬಿಡದೆ ಮಾಡುತ್ತಿದ್ದಾನೆ.ಅಂದು ತಡವಾದ ಕಾರಣ ಅವಳ ಮನೆಗೆ ಅವನೇ ಬಿಡುವುದಾಗಿ ಹೇಳಿ ಸಿದ್ಧವಾಗುತ್ತಿದ್ದರು ನಾನು ನೆಡೆದು ಕೊಂಡು ಹೋಗುತ್ತಿರುವುದನ್ನ ಕಂಡು ರಕ್ಷಿತ್ ನಮ್ಮ ಜೊತೆ ಬನ್ನಿ ಇವನು ಬಿಡುತ್ತಾನೆ.ಅಂದಳು ಇಲ್ಲ ಇಲ್ಲ ತೊಂದರೆ ಬೇಡ ನೀವು ಇಬ್ಬರಿರುವಿರಿ ಹೆಲ್ಮೆಟ್ ಬೇರೆ ಇಲ್ಲ ಹೋಗಿ ಸಿಗೋಣ ಎಂದೇ.ಆದರು ಬಲವಂತ ಮಾಡಿ ಬನ್ನಿ ಪರವಾಗಿಲ್ಲ ಎಂದು ಥ್ರಿಬಲ್ ರೈಡ್ ಪ್ರಾರಂಭವಾಯಿತು.
ನಿಜಕ್ಕೂ ಅವಳು ಅಪರೂಪದ ಹುಡುಗಿ ಆ ಸಂದರ್ಭದಲ್ಲಿ ಅಂದರೆ ಒತ್ತಲ್ಲದ ಒತ್ತಲ್ಲಿ ಇಬ್ಬರ ಹುಡಗುರ ನಡುವಲ್ಲಿ ಸಮಾಜವ ಲೆಕ್ಕಿಸದೆ ಮನೆಯವರ ನಂಬಿಕೆಗೆ ಪಾತ್ರಳಾಗಿ ಎಲ್ಲವ್ವನ್ನು ನಿಭಾಯಿಸುವ ಮನಸ್ಥಿತಿ ಅವಳಿಗಿತ್ತು.ಹೌದು ಇದನ್ನ ನೋಡಿದಾಗ ಕೆಟ್ಟ ಭಾವನೆಯಿಂದ ಸಮಾಜ ನೋಡುವುದು. ಆದರೆ ಇವಳನ್ನ ಕಂಡಾಗಿನಿಂದ ಇಲ್ಲಿಯ ತನಕ ಸಮಾಜಕ್ಕೆ ಸೆಡ್ಡು ಹೊಡೆಯುತ್ತಲೇ ಬಂದಿರುವ ದಿಟ್ಟ ಮನಸ್ಥಿತಿ ನನ್ನ ಕವನದ ಅವಳದ್ದು
ಪಯಣ ಸಾಗುತ್ತಿತ್ತು. ಲೈಟಾಗಿ ಅಸಿವು ಕಾಡಲಾರಂಭಿಸಿತು.ತಿಮ್ಮಿ ಏನಾದ್ರು ತಿನ್ನೋಣವ ಕಾಫಿ ಗೀಫಿ ಕುಡಿದು ಹೋಗುವ ಎಂದೇ.ತಿಮ್ಮ ಹೌದು ಇದು ಅವಳೇ ಹೇಳಿಕೊಟ್ಟ ಹೆಸರು ನಮ್ಮ ಚಾಟ್ ಸಂಭಾಷಣೆಯಲ್ಲಿ ಏನೋ ತರ್ಲೆ ಮಾಡಿದಾಗ ಸಾಕು ಮಲಗು ತಿಮ್ಮ ಎಂದು ಕರೆಯುತ್ತಾಳೆ.ಯಾರಾದರೂ ಪ್ರೀತಿಯಿಂದ ಇಟ್ಟ ಹೆಸರು ಸದಾ ಹಚ್ಚಳಿಯದೆ ಇರುತ್ತದೆ ಅದೇ ರೀತಿ ಅವಳು ಆ ಹೆಸರಿನಿಂದ ಕರೆಯುತ್ತಿದ್ದಳು.ಆದರೆ ಆಗಸ್ಟೆ ಬೆಳಕಿಗೆ ಬಂದು ಕತ್ತಲೆಡೆಗೆ ಪಯಣ ಬೆಳಿಸಿದ ತಿಮ್ಮ ಇಲ್ಲಿಯವರೆಗೂ ಕಂಡಿಲ್ಲ...ಅದೇ ಸಂಧರ್ಭದಲ್ಲಿ ತಿಮ್ಮ ಚನಾಗಿದೆ ಆಗಿದ್ರೆ ನೀನು ತಿಮ್ಮಿಯಾಗಿರು ಎಂದು ನಾಮಕರಣ ಮಾಡಿದೆ.ಸರಿ ಆಯಿತು ಗಾಡಿ  ನಿಲ್ಲಿಸು ಎಂದು ಗೆಳೆಯನಿಗೆ ಹೇಳುವಳು.ಅಂತೆಯೇ ಅಲ್ಲಿ ಕಾಫಿ ಕುಡಿದು ಹೊಟ್ಟೆಗೆ ಸ್ವಲ್ಪ ತಿಂದು ಮತ್ತೆ ಪಯಣ ಸಾಗಿತ್ತು.ಅವರ ತಂದೆ ನಮಗಾಗಿ ಕಾಯುತ್ತಿದ್ದರು.ಅಂತೂ ಇಂತೂ 22 ಕಿಮೀ ತಲುಪಿಯೇ ಬಿಟ್ಟೆವು.ಅವಳನ್ನ ತನ್ನ ತಂದೆಗೆ ಕೈವಶಮಾದುತ್ತಿದ್ದಂತೆಯೇ ಮಚ್ಚ ಎಂದಳು ತಿರುಗಿ ನೋಡಿದೆ ಸೆಲ್ಫಿ ಕ್ಲಿಕ್ಕಿಸಿ ಹುಷಾರು ಎಂದಳು ಯಾವ ನಿಜವಾದ ಪ್ರೇಮಿಗಾಗಲಿ ಆ ಕ್ಷಣ ಸಾಕು ಜೀವನ ಅವಳ ನೆನಪಲ್ಲಿ ತೂಗಲು ಎಂದುಕೊಂಡೆ. ನನ್ನ ಮನೆಗೆ ಬಿಡಲು ಗೆಳೆಯ ಬರುತ್ತಾನೆ .ತುಂಬಾ ತಡವಾಗಿತ್ತು ಸರಿ ಸುಮಾರು 9 ಆಗಿತ್ತು.ನನ್ನ ಬಿಟ್ಟು ದಾರಿ ತೋರದೆ ಪಾಪ ತುಂಬ ಸರ್ಕಸ್ ಮಾಡಿ ಗೆಳೆಯಿ ಮನೆ ತಲುಪುತ್ತಾನೆ.ಅವಳ ಜೊತೆ ಕಳೆದ ಅತ್ಯತ್ತಮ ದಿನಗಳಲ್ಲಿ ಇದು ಒಂದು ಅತ್ಯಮೂಲ್ಯ ನೆನಪು ಸದಾ ಕಾಡುವ ಕವಿತೆ… ನನಗೆ ಕೊಟ್ಟ ಕಾಡುವ ನೆನಪು
ಈ ನೆನಪಲ್ಲೆ  ಹಾಗೆ ಅವಳ ಚಾಟ್ ಸಂಭಾಷಣೆ ಯಲ್ಲೇ ದಿನಗಳು ಕಳೆದವು.ಈಗ ಸೇಮ್ ಹಾಲಿಡೇಸ್ ಅವಳನ್ನ ನೋಡದ ಮಾತಡದ ದಿನವೇಕೆ ಎಂದೆಲ್ಲಾ ಕಾಡಿದ್ದುಂಟು. ಅವಳ ನೆನಪಾದಗಲೆಲ್ಲ ನಮ್ಮ ಸಂಭಾಷಣೆಯನ್ನ,ಅವಳು ಕಳುಹಿಸಿದ ಆಡಿಯೋ ವಾಯ್ಸ್ ಅನ್ನ ,ಹಾಗೆ ಸಾದ್ಯಕ್ಕಿದ್ದ ನಮ್ಮ ಸೆಲ್ಫಿಯನ್ನ ನೆನೆದು ಸುಮ್ಮನಾಗುತ್ತಿದ್ದೆ.ಈಗೆ ಒಂದು ದಿನ ತಿಮ್ಮಿ ನಾನು ನೀನು ಮತ್ತೆ ಅವನು (ಅವಳ ಮತ್ತೆ ನನ್ನ ಆಪ್ತ) ಎಲ್ಲಾದರೂ ಹೋಗಣ ಎಂದೇ ಸರಿ ಆಯ್ತು ಹೋಗಣ ಎಂದಳು ಆದರೆ ಆ ವಿಷಯ ಮುಂದೆ ಪ್ರಸ್ತಾಪ ಆಗುವಷ್ಟರಲ್ಲೇ ಇನ್ನೊಂದು ಆಘಾತಕಾರಿ ವಿಷಯವೊಂದು ನನ್ನ ಕಾಯುತ್ತಿತ್ತು ಮತ್ತೊಬ್ಬ ಹುಡುಗನಿಂದ ಲವ್ ಅಪ್ರೋಚ್ ಆತ ನನಗೂ ಗೊತ್ತಾದರೂ ಅಷ್ಟೇನು ನಂಟಿರಲಿಲ್ಲ ನಂಟು ಅನ್ನುವುದಕ್ಕಿಂತ ಒಮ್ಮೆ ನನ್ನ ಗೆಳೆಯರಿಗೂ ಅವನಿಗೂ ಈಗೆ ಕಾದಾಟವಾಗಿತ್ತು.ಆದರೂ ಇವಳು ಅವನನ್ನ ಒಪ್ಪುವುದಿಲ್ಲ ತಿರಸ್ಕಾರ ಮಾಡುತ್ತಾಳೆ.ಒಮ್ಮೆ ನಿಟ್ಟುಸಿರು  ಬಿಡುತ್ತಾ ಮನಸ್ಸಿಗೆ ಸಮಾಧಾನವಾಗಿತ್ತು .ಸಂಜೆ ಹೋಗಿ ನೆಮ್ಮದಿಯ ನಿದ್ದೆ ಮಾಡಿ ಎದ್ದು ಮೊಬೈಲ್ ನೆಟ್ ಒನ್ ಮಾಡಿದೆ.ಹೃದಯವೇ ನಿಂತಂತಾಗಿ ಮನಸ್ಸು ಅಲ್ಲೋಲ ಕಲ್ಲೋಲವಾಗಿ ನನ್ನ ಜನ್ಮ ಇಂದಿಗೆ ಕೊನೆಎಂದು ಕೊಂಡು ಬಿಟ್ಟಿದ್ದ ರಕ್ಷಿ.ಅವಳ ವಾಟ್ಸಪ್ ಡೀಪಿಯಲ್ಲಿ ಅವನ ಫೋಟೋ ಕೊಂಡು ಬೆಕ್ಕಸ ಬೇರಾಗಾಗಿ ಕಂಗಾಲಾಗಿ ಒಂದು ಗಂಟೆಯ ಅವಧಿ ಅತ್ತಿದ್ದಿದೆ.


ಕಥೆ ಮುಂದುವರಿಯುತ್ತದೆ…..ನಿರೀಕ್ಷಿಸ

Comments

Popular Posts