ನಾನ್ಯಾರು ಬಲ್ಲಿರ


ಮನದಿ ಸಾವಿರ ದು:ಖವ ಕಾಪಿಟ್ಟು
ಆ ದು:ಖವ ಅಡಗಿಸಲು ಮೈರೆತು ಮೈಕೊಟ್ಟ
ತೆವಲು ಎಂಬ ಪಟ್ಟತೊಟ್ಟು
ನನಗಿದೊಂದು ಬಿಟ್ಟರೆ ಬೇರೆನು ಗತಿ
 ಈ ಜನ್ಮದ ದುರ್ವಿದಿಗೆ ಪಾತ್ರಳಾದ ನನ್ನನ್ನು
ಏನೆಂದಾರು ಬಲ್ಲಿರಾ


ಕಾಮುಕರ ಬಲೆಗೆ ಸಿಲುಕಿ
ಕಷ್ಟಕ್ಕೆ ಪರಿಹಾರ ಹುಡುಕಿ
ಮೂರೊತ್ತಿನ ಕೂಳಿಗೆ ಪರ ದೇಹ ಒರುವ ಕೂಲಿಗಾರಳಾಗಿ
ಶುದ್ದ ಮನಸಿನ ಕೆಟ್ಟ ಹೆಣ್ಣುನ
ನಾ ಯಾರೆಂದು ಬಲ್ಲಿರ


ಯಾರದೊ ಸ್ವಾರ್ಥಕ್ಕೆ ಮೂಖಳಾಗಿ
ಅಲವು ಮನೆಯ ವಿಷದ ರುಚಿಯ ನೋಡಿ
ಪತೀವ್ರತೆಗಳ ಶಾಪಕ್ಕೆ ಸಿಳುಕಿ
ಅಂಟು ಮುಂಟಿನ ದೇಹ ಒತ್ತು ಅನಾಥ ಶವಾಗುವ
ನಾನ್ಯಾರೆಂದು ಬಲ್ಲಿರಾ


ಕಾಲ ಕಸಕ್ಕಿಂತು ಬಂಡಾಯಿತು ಜೀವನ
ಬಂಡರ ಅಮಲಿಗೆ ನನ್ನ  ಯವ್ವನ
ಮಂದಿ ಮಕ್ಕಳಿಗೆಲ್ಲ ಬೋಗವಾದೆನಲ್ಲ
ಕಾಮಕ್ಕೆ ಕಣ್ಣಿಲ್ಲವೆಂದು ಮನವು ಕೊರಗಿತಲ್ಲ
ಇನ್ನು ತಿಳಿಯದೆ ಇರುವುದಿಲ್ಲ


ನಾನ್ಯಾರೆಂದು ಮನಸು ಹೇಳಿತಲ್ಲ
ಸಮಾಜ ಕರೆವುದು ವ್ಯಭಿಚಾರಿಎಂದೆನ್ನ
ತಿಳಿದರೇನು ತಿಳಿಯದಿದ್ದರೇನು
ನೋವ ಬಲ್ಲಿರಾ


ಸಮಾಜದಲ್ಲಿ ಬಾಳು ಕೊಡುವಿರ ?

Comments

Popular Posts